ಸ್ಯಾಂಡಲ್ವುಡ್ನ ಯುವರಾಜ ನಿಖಿಲ್ ಕುಮಾರ್ ಅವರ ಬಹು ನಿರೀಕ್ಷಿತ ‘ರೈಡರ್’ ಚಿತ್ರದ ಮತ್ತೊಂದು ಹಾಡು ಲಹರಿ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ‘ಮೆಲ್ಲನೆ ಬೆರಳ ಬೆಸೆದು’ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಸಿನಿರಸಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಹಾಡಿನಲ್ಲಿ ಸ್ಟೈಲಿಶ್ ಲುಕ್ನಲ್ಲಿ ನಿಖಿಲ್ ನಟಿ ಕಾಶ್ಮೀರಿ ಪರ್ದೇಸಿ ಜೊತೆ ಸ್ಲೋ ಮೂಮೆಂಟ್ ಸ್ಟೆಪ್ಸ್ ಹಾಕಿದ್ದಾರೆ. ಕಲರ್ಫುಲ್ ಆಗಿ ಮೂಡಿಬಂದಿರುವ ಈ ಹಾಡಿಗೆ ಕವಿರಾಜ್ ಸಾಹಿತ್ಯವಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಯೋಜಿಸಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ.
****