21.8 C
Bengaluru
Wednesday, November 30, 2022
spot_img

‘ಭಜರಂಗಿ 2’ ಶೋ ಗೆ ಬಂದ ಫ್ಯಾನ್ಸ ಗೆ ಊಟ ಬಡಿಸಿದ ಶಿವಣ್ಣ

ಶಿವರಾಜ್​​ಕುಮಾರ್​ ನಟನೆಯ ‘ಭಜರಂಗಿ 2’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ರಿಲೀಸ್​ ಆಗಿ 15 ದಿನ ಮೇಲಾದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಿನಿಮಾ ರಿಲೀಸ್​ ಆದ ದಿನವೇ ಪುನೀತ್​ ನಿಧನ ಹೊಂದಿದ್ದರು. ಹೀಗಾಗಿ ಅಭಿಮಾನಿಗಳ ಜತೆ ಸಿನಿಮಾ ನೋಡೋಕೆ ಶಿವಣ್ಣನಿಗೆ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಭಾನುವಾರ (ನವೆಂಬರ್ 14) ಶಿವರಾಜ್​ಕುಮಾರ್ ಅಭಿಮಾನಿಗಳೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಫ್ಯಾನ್ಸ್ ಗೆ ಅನ್ನ ಸಂತರ್ಪಣೆ ಮಾಡಿದ್ದಾರೆ.

‘ಈ ನೋವಿನಲ್ಲೂ ಅಭಿಮಾನಿಗಳು ‘ಭಜರಂಗಿ 2’ ನೋಡುತ್ತಿದ್ದಾರೆ. ನಮ್ಮ ಕಷ್ಟದಲ್ಲಿ ಅಭಿಮಾನಿಗಳು ಜೊತೆಯಾಗಿದ್ದಾರೆ. ಈ ಕಷ್ಟದ ಸಮಯದಲ್ಲೂ ಚಿತ್ರ ನೋಡಿ ನಮ್ಮ ಜೊತೆ ಅಭಿಮಾನಿಗಳು ನಿಂತಿದ್ದಾರೆ. ಪ್ರೇಕ್ಷಕರು ನಮಗೆ ನೀಡಿರುವ ಈ ಬೆಂಬಲಕ್ಕೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಶಿವರಾಜ್​​ಕುಮಾರ್ ಈ ಮೊದಲು ಹೇಳಿದ್ದರು.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles