ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರವಾದ “ಅವತಾರ ಪುರುಷ” ಚಿತ್ರ ಬಿಡುಗಡೆ ದಿನಾಂಕವನ್ನ ಅಧಿಕೃತವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಿಳಿಸಲಾಗಿದೆ.ಸುನಿ ನಿರ್ದೇಶಿಸಿ ಶರಣ್ ನಟಿಸಿರುವ “ಅವತಾರ ಪುರುಷ” ಸಿನಿಮಾ ಚಿತ್ರಮಂದಿರಕ್ಕೆ ಡಿಸೆಂಬರ್ 10 ರಂದು ಲಗ್ಗೆ ಇಡಲಿದೆ.
ಅವತಾರ ಪುರುಷ ಚಿತ್ರದಲ್ಲಿ ಶರಣ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನ ಅಷ್ಟೇ ಅದ್ದೂರಿಯಾಗಿ ನಿರ್ಮಿಸಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.ಈಗಾಗಲೇ ಈ ಚಿತ್ರದ ಪ್ರಚಾರ ಕಾರ್ಯ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಚಾರದ ಬಗ್ಗೆ ಭಾರಿ ವೈರಲ್ ಆಗಿದೆ. ಈ ಚಿತ್ರದಲ್ಲಿ ಸಾಯಿ ಕುಮಾರ್, ಸುಧಾರಾಣಿ, ಅಯ್ಯಪ್ಪ , ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಅವತಾರ ಪುರುಷನಿಗೆ ಅರ್ಜುನ್ ಜನ್ಯ ಸಂಗೀತ , ವಿಲಿಯಮ್ ಡೇವಿಡ್ ಛಾಯಾಗ್ರಹಣ, ವಿಕ್ರಮ್ ಮೊರ್ ನೃತ್ಯ ಸಂಯೋಜನೆಯಿದೆ. ಈ “ಅವತಾರ ಪುರುಷ ಭಾಗ 1 , ಭಾಗ 2ಕೂಡ ತೆರೆ ಮೇಲೆ ರಾರಾಜಿಸಲಿದೆ. ಸದ್ಯ ಎಲ್ಲ ಅಂದುಕೊಂಡಂತೆ ನಡೆಯುತ್ತಿದ್ದು ಅದ್ದೂರಿಯಾಗಿ ಅವತಾರಪುರುಷ ಡಿಸೆಂಬರ್ 10 ರಂದು ಬೆಳ್ಳಿ ಪರದೆ ಮೇಲೆ ಅವತರಿಸಲಿದೆ.