22.9 C
Bengaluru
Sunday, March 26, 2023
spot_img

‘ಟಾಮ್ ಅಂಡ್ ಜೆರ್ರಿ’ ಆಟ ಬಲು ಮಜವಾಗಿದೆ..!

ಟಾಮ್ ಅಂಡ್ ಜೆರ್ರಿ ಸಿನಿಮಾ ನಿನ್ನೆ (ನ 12) ರಾಜ್ಯಾದ್ಯಂತ ರಿಲೀಸ್ ಆಗಿದೆ. ಟ್ರೇಲರ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಥಿಯೇಟರ್ ನಲ್ಲಿ ಆ ನಿರೀಕ್ಷೆಯನ್ನ ಫುಲ್ ಫಿಲ್ ಮಾಡಿದೆ. ರೈಟರ್ ಆಗಿ ಎಲ್ಲರ ಗಮನ ಸೆಳೆದಿದ್ದ ರಾಘವ್ ವಿನಯ್ ಶಿವಗಂಗೆ ಇದೀಗ ಮೊದಲ ಬಾರಿ ಡೈರೆಕ್ಟರ್ ಆಗಿಯೂ ಯಶಸ್ಸು ಕಂಡಿದ್ದಾರೆ.

ಟಾಮ್ ಅಂಡ್ ಜೆರ್ರಿ ಸಿನಿಮಾ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಮಧ್ಯಮ ವರ್ಗದ ಫ್ಯಾಮಿಲಿ ಕಷ್ಟ ಸುಖಗಳನ್ನ ಕಟ್ಟಿಕೊಡುವ ಸಿನಿಮಾ. ಮಿಡಲ್ ಕ್ಲಾಸ್ ನಲ್ಲಿ ಹುಟ್ಟಿರೋ ನಾಯಕ ಧರ್ಮ, ಏನಾದರೂ ಸಾಧಿಸಬೇಕೆಂಬ ಆಸೆ ಹೊತ್ತವನು. ಶ್ರೀಮಂತಿಕೆಯಲ್ಲಿ ಹುಟ್ಟಿ ಬೆಳೆದರೂ ಅದರ ಆಮಿಷಕ್ಕೆ ಒಳಗಾಗದೇ ಇದ್ದಷ್ಟು ದಿನ ಹಾಯಾಗಿ ಇದ್ದು ಬಿಡಬೇಕು ಎಂಬ ನಾಯಕಿ ಸತ್ಯ. ಇಬ್ಬರು ಪರಸ್ಪರ ಭಿನ್ನ ಆಲೋಚನೆಯ ಮನಸ್ಥಿತಿಯ ಸ್ನೇಹಿತರು ಪ್ರೀತಿ ಬಂಧಕ್ಕೆ ಒಳಗಾದಗ ಏನಾಗುತ್ತೆ ಎಂಬ ಎಳೆ ಜೊತೆಗೆ ಭಾವನಾತ್ಮಕ ಹಾಗೂ ಆಧ್ಯಾತ್ಮದ ಸೆಲೆಯನ್ನು ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಕೇವಲ ಪ್ರೀತಿ, ಪ್ರೇಮದ ಎಳೆಯಲ್ಲೇ ಸಿನಿಮಾ ಗಿರಿಕಿ ಹೊಡೆಯದೆ ಬದುಕಿನ ವಾಸ್ತವತೆಯನ್ನು ಉಣಬಡಿಸುತ್ತೆ ಸಿನಿಮಾ. ಅದಕ್ಕೆಂದೇ ಒಂದಿಷ್ಟು ರೋಚಕ ಟ್ವಿಸ್ಟ್ ಟರ್ನ್ ಗಳು ಸಿನಿಮಾದಲ್ಲಿದ್ದು ಎಲ್ಲವೂ ನೋಡುಗರನ್ನು ಇನ್ನಿಲ್ಲದಂತೆ ಕಾಡುತ್ತೆ.

ನಮ್ಮದೇ ಕಥೆಯಂತೆ ಭಾಸವಾಗುವಂತೆ ಮಾಡುತ್ತೆ. ಚಿತ್ರದ ಡೈಲಾಗ್ ಗಳು ಒಂದಕ್ಕಿಂತ ಒಂದು ಅಧ್ಬುತವಾಗಿ ಮೂಡಿ ಬಂದಿದ್ದು, ಅಷ್ಟೇ ಅರ್ಥಗರ್ಭಿತವೂ ಆಗಿದೆ. ಹೊಸತನದ ಸ್ಕ್ರೀನ್ ಪ್ಲೇ, ಎಲ್ಲೂ ಅಭಾಸ ಎನಿಸದ ಸಂಭಾಷಣೆ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ.

ಚಿತ್ರದ ಪಾತ್ರಧಾರಿಗಳ ನಟನೆ ಬಗ್ಗೆ ಮಾತನಾಡೋದಾದ್ರೇ ನಾಯಕ ನಿಶ್ಚಿತ್ ಕೊರೋಡಿ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಚಿತ್ರರಂಗಕ್ಕೆ ಒಬ್ಬ ಭರವಸೆಯ ನಟನಾಗೋ ಎಲ್ಲ ಲಕ್ಷಣ ಇವರಲ್ಲಿದೆ. ಆದ್ರಿಂದ ನಟನೆಯಲ್ಲಿ ಇವ್ರಿಗೆ ಫುಲ್ ಮಾರ್ಕ್ಸ್ ಸಿಗೋದ್ರಲ್ಲಿ ದೂಸ್ರಾ ಮಾತಿಲ್ಲ.

ನಟಿ ಚೈತ್ರಾ ರಾವ್ ಕೂಡ ಅರಳು ಹುರಿದಂತೆ ಮಾತನಾಡುತ್ತ ಮುದ್ದಾದ ಲುಕ್ ನಲ್ಲಿ ಎಲ್ಲರನ್ನು ಸೆಳೆಯುತ್ತಾರೆ. ನಾಯಕನ ತಾಯಿ ಪಾತ್ರದಲ್ಲಿ ತಾರಾ ನಟನೆ ಮನೋಜ್ಞವಾಗಿ ಮೂಡಿ ಬಂದಿದ್ದು ಕಣ್ಣಂಚಲ್ಲಿ ನೀರು ತರಿಸುತ್ತೆ. ಉಳಿದಂತೆ ಎಲ್ಲ ಪಾತ್ರವರ್ಗವೂ ಅಚ್ಚುಕಟ್ಟಾಗಿ ನಟಿಸಿ ಗಮನ ಸೆಳೆಯುತ್ತಾರೆ.

ಮ್ಯಾಥ್ಯೂಸ್ ಮನು ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸಂಕೇತ್ ಎಂವೈಎಸ್ ಛಾಯಾಗ್ರಹಣ ಕೂಡ ಚಿತ್ರದ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಹೆಚ್ಚಿನ ಪಾತ್ರವಹಿಸಿದೆ. ಸಿನಿಮಾ ಕೊಂಚ ಲ್ಯಾಗ್ ಎನಿಸುತ್ತದೆ ಎಂಬುದನ್ನು ಹೊರತು ಪಡಿಸಿದ್ರೆ ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ ಟಾಮ್ ಅಂಡ್ ಜೆರ್ರಿ.

ಚಿತ್ರ : ಟಾಮ್ ಅಂಡ್ ಜೆರ್ರಿ
ನಿರ್ದೇಶಕ : ರಾಘವ್ ವಿನಯ್ ಶಿವಗಂಗೆ
ನಿರ್ಮಾಪಕ : ರಾಜು ಶೇರಿಗಾರ್
ಸoಗೀತ : ಮ್ಯಾಥ್ಯೂಸ್ ಮನು
ಛಾಯಾಗ್ರಾಹಕ : ಸoಕೇತ
ತಾರಾಗಣ : ನಿಶ್ಚಿತ , ಚೈತ್ರಾ ರಾವ್, ಸoಪತ್, ತಾರಾ, ಜೈ ಜಗದೀಶ್, ಸೂರ್ಯ ಶೇಖರ್

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles