21.8 C
Bengaluru
Friday, March 24, 2023
spot_img

ಅಪ್ಪು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ರಕ್ಷಿತಾ..!

ಪುನೀತ್​ ರಾಜ್​ಕುಮಾರ್  ಕುಟುಂಬದ ಜೊತೆ ನಟಿ ರಕ್ಷಿತಾ ಪ್ರೇಮ್  ಅವರಿಗೆ ಆಪ್ತ ಒಡನಾಟ ಇದೆ. ರಕ್ಷಿತಾ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದೇ ಪುನೀತ್​ ನಟನೆಯ ಅಪ್ಪುಚಿತ್ರದ ಮೂಲಕ. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇತ್ತು. ಪುನೀತ್​ ನಿಧನರಾದ ಸುದ್ದಿ ಕೇಳಿ ರಕ್ಷಿತಾಗೆ ತೀವ್ರ ಆಘಾತ ಆಗಿತ್ತು. ಆ ಘಟನೆ ನಡೆದು ಕೆಲವೇ ದಿನಗಳು ಕಳೆದಿದೆ. ಅಷ್ಟೆರಲ್ಲಾಗಲೇ ಪುನೀತ್​ಗೆ ಅವಮಾನ ಮಾಡಿರುವ ಆರೋಪ ರಕ್ಷಿತಾ ಮೇಲೆ ಬಂದಿದೆ. ಅದಕ್ಕೆ ಕಾರಣ ಆಗಿದ್ದು ಏಕ್​ ಲವ್​ ಯಾಚಿತ್ರದ ಹಾಡಿನ ಕಾರ್ಯಕ್ರಮ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಪುನೀತ್​ ಫೋಟೋ ಇರಿಸಿ ನಮನ ಸಲ್ಲಿಸಲಾಗಿತ್ತು. ಬಳಿಕ ಹಾಡು ಬಿಡುಗಡೆ ಮಾಡುವಾಗ ಶಾಂಪೇನ್​ ಬಾಟಲ್​ ಓಪನ್​ ಮಾಡುವ ಮೂಲಕ ಚಿತ್ರತಂಡದಿಂದ ಅಪ್ಪುಗೆ ಅಗೌರವ ತೋರಲಾಗಿದೆ. ಆ ಬಗ್ಗೆ ರಕ್ಷಿತಾ ಪ್ರೇಮ್​ ಪ್ರತಿಕ್ರಿಯೆ ನೀಡಿದ್ದು, ಪುನೀತ್​ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

‘ಅಪ್ಪು ಅಗಲಿಕೆಯ ನೋವಿಂದ ನಾನಿನ್ನೂ ಹೊರಬರಲು ಸಾಧ್ಯವಾಗಿಲ್ಲ. ಹಲವಾರು ವಿಷಯಗಳು ನನ್ನನ್ನು ಇನ್ನೂ ಕಾಡುತ್ತಿವೆ. ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್​ ಓಪನ್​ ಮಾಡಿದ್ದು ಅಪ್ಪು ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಗಿದ್ದರೆ ನನ್ನ ಮತ್ತು ನನ್ನ ತಂಡದ ಕಡೆಯಿಂದ ಕ್ಷಮೆ ಯಾಚಿಸುತ್ತೇವೆ. ಇದು ಯಾವುದೂ ಉದ್ದೇಶಪೂರ್ವಕವಲ್ಲ. ಅಪ್ಪು ಇಂದಿಗೂ ಎಂದಿಗೂ ನಮ್ಮ ಮನಸ್ಸಿನಲ್ಲಿದ್ದಾರೆ’ ಎಂದು ರಕ್ಷಿತಾ ಪ್ರೇಮ್​ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles