17.8 C
Bengaluru
Saturday, December 10, 2022
spot_img

“ಪ್ರೇಮಂ ಪೂಜ್ಯಂ” ಇದು ಹೃದಯಗಳಾ ವಿಷಯ..! ರಿವ್ಯೂ

ಲವ್ಲಿ ಸ್ಟಾರ್ ಪ್ರೇಮ್ ಸಿನಿ ಕೆರಿಯರ್ ನ 25ನೇ ಚಿತ್ರ ಮತ್ತು ಹೆಚ್ಚು ನಿರೀಕ್ಷೆ ಮೂಡಿಸಿದ್ದ ಪ್ರೇಮಂ ಪೂಜ್ಯಂ ಚಿತ್ರಕ್ಕೆ 50-50 ಎನ್ನುತಿದ್ದಾನೆ ಪ್ರೇಕ್ಷಕ. ಟೈಟಲ್ ನಲ್ಲಿರುವಂತೆ ನಾಯಕ ತನ್ನ ಪ್ರೀತಿಯನ್ನು ಅತಿಯಾಗಿ ಪೂಜಿಸುವ ಗುಣದವನು, ನಾಯಕಿಯನ್ನು ಕೊನೆಯವರೆಗೂ ಒಂದು ಸಣ್ಣ ಸ್ಪರ್ಶವನ್ನು ಮಾಡದೆ ತನ್ನ ಪ್ರೀತಿಯನ್ನು ಕಾಪಿಟ್ಟುಕೊಳ್ಳುವ ನಾಯಕ. ಚಿತ್ರದ ನಿರ್ದೇಶಕರಾದ ರಾಘವೇಂದ್ರ ಅವರು  ವೃತ್ತಿಯಲ್ಲಿ ವೈದ್ಯನಾದ್ದರಿಂದ ಈ ಕಥೆಯನ್ನು ಹೆಣೆದಿದ್ದಾರೆ ಎನ್ನಬಹುದು. ದ್ವಿತಿಯಾರ್ಧ ಯಾಕೋ ವೈದ್ಯರು ಎಡವಿದಂತೆ ಕಾಣುತ್ತದೆ. ಹೃದಯದ ಭಾಷೆಯನ್ನು ಸಾಕಷ್ಟು ಎಳೆದಿದ್ದಾರೆ ನಿರ್ದೇಶಕರು, ಈ ಎಳೆತದಿಂದ ಪ್ರೇಕ್ಷಕ ಕೊಂಚ ಸುಸ್ತಾದಂತೆ ಕಾಣುತಾನೆ.  

ಮಧ್ಯಮ ವರ್ಗದಲ್ಲಿ ಬುದ್ದಿವಂತನಾಗಿ ಹುಟ್ಟಿ ನಾನು ಏನಾದರೂ ಸಾಧನೆಯನ್ನು ಮಾಡಬೇಕೆಂದು ಪ್ರಯತ್ನ ಪಟ್ಟಾಗ ತನ್ನ ಕುಟುಂಬದಿಂದಲೂ ಬೆಂಬಲ ಸಿಕ್ಕಾಗ ಕನಸಿನ ಸಾಧನೆಯೊಂದು ಯಶಸ್ವಿಯಾಗುತ್ತದೆ ಎನ್ನುವುದನ್ನು ಈ ಚಿತ್ರ ಸಾಕ್ಷೀ ಕರಿಸುತ್ತದೆ. ಮಂಡ್ಯ ಜಿಲ್ಲೆಯ ಮಧ್ಯಮ ಗೌಡ ರೈತ ಕುಟಂಬದಲ್ಲಿ ಹುಟ್ಟಿದ ಶ್ರೀಹರಿ (ನಾಯಕ) ತಾನು ವೈದ್ಯನಾಗಿ ಬಡವರ ಸೇವೆಯನ್ನು ಮಾಡುವ ಕನಸನ್ನು ಹೊತ್ತಿರುತ್ತಾನೆ. ಇದಕ್ಕೆ ತನ್ನ ಕುಟಂಬದಲ್ಲಿ ಸಾಮರ್ಥ್ಯವಿದೆಯೇ ಎನ್ನುವ ಪ್ರಶ್ನೆಯನ್ನು ತಾನೇ ಹಾಕಿಕೊಂಡು ಏನೂ ಸಾಧ್ಯವಾಗದೇ ಇದ್ದಾಗ ರೈತನಾಗಿ ಅನ್ನದಾತನಾಗುವ ಭಾಗ್ಯವಂತೂ ಇದೇ ಎನ್ನುವ ಅಚಲವಾದ ನಂಬಿಕೆಯನ್ನು ಇಟ್ಟು ತಂದೆ ತಾಯಿಯರಲ್ಲಿ ತಾನು ವೈಧ್ಯನಾಗುವ  ಇಂಗಿತವನ್ನು ಹೇಳುತ್ತಾನೆ.

ಕುಟುಂಬದಲ್ಲಿ ಮೊದಲಿಗೆ ಹಣಕಾಸಿನ ತೊಂದರೆ ಇದ್ದರೂ ಸಾಲವನ್ನು ಮಾಡಿ ಮಗ ಸಾಧನೆಯನ್ನು ಮಾಡಿ  ವೈದ್ಯನಾಗುವ ನಂಬಿಕೆ ಮತ್ತು  ಪ್ರಯತಕ್ಕೆ ಕೈ ಜೋಡಿಸಿ ಮೆಡಿಕಲ್ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ. ಇಲ್ಲಿಂದ ಪ್ರಾರಂಭವಾಗುವುದೇ ಶ್ರೀ ಹರಿಯ ಪ್ರೇಮಕಥೆ. ಮೊದಲನೇ ಕ್ಲಾಸ್ ನಲ್ಲಿಯೇ  ಶರ್ಲಿ (ನಾಯಕಿಯ) ಲೇಟ್ ಎಂಟ್ರಿ ಜೊತೆಗೆ ಶುರುವಾಗುವ  ಶ್ರೀ ಹರಿಯ ಎದೆಬಡಿತ ಕೊನೆಯಲ್ಲಿಯೇ ನಿಲ್ಲವುದು.  ಅಪ್ಪಟವಾದ ಪ್ರೇಮವನ್ನು ಹೇಳಿಕೊಳ್ಳದೇ ತನ್ನದೇ ಮನಸ್ಸಿನ ಭಾಷೆಯಿಂದ ತೋರಿಸುವ ನಾಯಕನ ಮನಸ್ಸಿನ ಭಾಷೆ ಬಹುಬೇಗ ಅರ್ಥ ಮಾಡಿಕೊಳ್ಳುವ ಶರ್ಲಿ ತನ್ನ ಮನೆಯವರೊಂದಿಗೆ ಪ್ರಸ್ತಾಪಿಸಲು ಸಾಧ್ಯವಾಗದೇ  ತೊಳಲಾಟದಲ್ಲಿ ಇರುವಾಗ ತನ್ನ  ಮಗಳ ಮನದಾಳದ ಆಸೆಯನ್ನು ತಂದೆಯ ಹೃದಯ ಗುರುತಿಸುತ್ತದೆ.

ಅವಳ ಬೆಂಬಲ ಕ್ಕೂ ನಿಲ್ಲುತ್ತದೆ. ಆದರೆ  ಈ ಪ್ರೇಮಕಥೆಗೆ ಧರ್ಮದ ಗೋಡೆ ಅಡ್ಡಬರುತ್ತದೆ. ಅಪ್ಪಟ ಮನಸ್ಸಿನ ಪ್ರೇಮ ಪ್ರೀತಿಯನ್ನು ಪೂಜಿಸುವ ಶ್ರೀಹರಿ ತಾನು ಮಾಡಬೇಕೆಂದಿರುವ ಸಾಧನೆಗೆ ಯಾವುದೇ ಭಾವನಾತ್ಮಕ ಸಮಸ್ಯೆಯನ್ನು ತಂದುಕೊಳ್ಳದೇ ದೊಡ್ಡ ವೈದ್ಯನಾಗುವ ಕನಸನ್ನು ನನಸುಮಾಡಿಕೊಂಡು ಸಾಕಷ್ಟು ಬಡವರ ಪಾಲಿನ ಹೃದಯ ಸಾಮ್ರಾಜ್ಯದಲ್ಲಿ ನೆಲೆಯೂರುತ್ತಾನೆ. ಹೀಗೆ ಹೃದಯಾಂತಾರಳದ ಹೃದಯವನ್ನು ಪೂಜಿಸುವಲ್ಲಿಯೇ  ನಿರತನಾಗುತ್ತಾನೆ ಶ್ರೀಹರಿ.

ಚಿತ್ರದಲ್ಲಿ ಒಟ್ಟು 12 ಹಾಡುಗಳಿದ್ದು ಸಂಗೀತ ಮನಸ್ಸಿಗೆ ಹಿಡಿಸುವಂತಿದ್ದರು ಸಾಹಿತ್ಯ ಕೈತಪ್ಪಿದೆ, ಈ ಹಾಡುಗಳೆ ಕೆಲವೊಮ್ಮೆ ಪ್ರೇಕ್ಷಕನ ತಲೆ ಚಿಟ್ಟು ಹಿಡಿಯುವಂತೆ ಮಾಡುತ್ತದೆ. ಛಾಯಾಗ್ರಹಣ ಚೆಂದವಾಗಿದ್ದು ಲೊಕೇಶನ್ಗಳು ಕೂಡ ಅದ್ಬುತವಾಗಿದೆ. ಸಾಧುಕೋಕಿಲ, ಆನಂದ್ ಮತ್ತು ಬೃಂದಾ ಆಚಾರ್ಯ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇನ್ನು ಲವ್ಲಿ ಸಾರ್ ಪ್ರೇಮ್ ಲವ್ಲಿ ಲವ್ಲಿಯಾಗಿ ಏಳು ಶೇಡ್ ಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕನಿಗೆ ಇಷ್ಟವಾಗುತ್ತಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles