ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆ ಮೈಬಿಡಲಾಗದ ಚಳಿ ಇನರ ನಡುವೆ ನಟ ‘ನೆನಪಿರಲಿ’ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಸಿನಿಮಾದ ಬಿಡುಗಡೆ ಆಗಿದೆ, ಚಳಿ ಮಳೆಯನ್ನು ಲೆಕ್ಕಿಸದೆ ಇಂದು (Morning show) ಚಿತ್ರಮಂದಿರಕ್ಕೆ ಬಂದು ಪ್ರೇಕ್ಷಕರು ಚಿತ್ರ ವೀಕ್ಷಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮತ್ತೆ ಹಳೇ ಚಾರ್ಮ್ ಮರಳುತ್ತಿದೆ. ಎರಡನೇ ಲಾಕ್ಡೌನ್ ಬಳಿಕ ಮಂಕಾಗಿದ್ದ ಚಿತ್ರರಂಗ ಈಗ ಚೇತರಿಸಿಕೊಳ್ಳುತ್ತಿದೆ.
ರಾಜ್ಯದ ಹಲವೆಡೆ ತಾಪಮಾನ ಕುಸಿದಿದೆ. ಬೆಂಗಳೂರಿನಲ್ಲಿ ಚಳಿಯ ವಾತಾವರಣ ಇದೆ. ಚಿಟಪಟ ಮಳೆ ಸುರಿಯುತ್ತಲೇ ಇದೆ. ಅದರ ನಡುವೆಯೂ ಜನರು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇಂದು (ನ.12) ಬಿಡುಗಡೆ ಆಗಿರುವ ‘ಪ್ರೇಮಂ ಪೂಜ್ಯಂ’ ಚಿತ್ರವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಇದು ‘ಲವ್ಲೀ ಸ್ಟಾರ್’ ಪ್ರೇಮ್ ಅಭಿನಯದ 25ನೇ ಸಿನಿಮಾ ಎಂಬುದು ವಿಶೇಷ. ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಪ್ರೇಮಂ ಪೂಜ್ಯಂ’ ಬಿಡುಗಡೆ ಆಗಿದೆ. ಬೆಂಗಳೂರಿನ ‘ತ್ರಿವೇಣಿ’ ಥಿಯೇಟರ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಮೊದಲ ಶೋ ನೋಡಲು ಪ್ರೇಮ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಬೃಂದಾ ಆಚಾರ್ಯ ಐಂದ್ರಿತಾ ರೇ, ಸಾಧುಕೋಕಿಲ ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ. ಡಾ. ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ.
****