22.9 C
Bengaluru
Friday, March 24, 2023
spot_img

‘ಮದಗಜ’ ಚಿತ್ರದ ಟೈಟಲ್ ಸಾಂಗ್ “ಅಪ್ಪು” ಗೆ ಅರ್ಪಣೆ!

ಶ್ರೀಮುರಳಿ ನಾಯಕನಾಗಿ ಅಭಿನಯಿಸಿರುವ “ಮದಗಜ” ಚಿತ್ರದ ಹಾಡು ರಿಲೀಸ್ ಆಗಿದ್ದು ಆ ಹಾಡನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡಿದ್ದಾರೆ. ನಂತರ ಮಾತನಾಡಿದ ಶ್ರೀಮುರಳಿ ಪುನೀತ್ ನನ್ನ ಇಂಟ್ರಡಕ್ಷನ್ ಸಾಂಗ್ ನೋಡಿ ಮೆಚ್ಚಿಕೊಂಡಿದ್ರು ಹಾಗಾಗಿ ಪೂಜೆ ಸಲ್ಲಿಸಿ ಅವರಿಗೆ ಸಾಂಗ್ ಅರ್ಪಿಸುತ್ತೇವೆ, ಅಪ್ಪುರನ್ನ ಯಾವತ್ತು ನಮಗೆ ಮರೆಯೋಕೆ ಆಗಲ್ಲ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ, ಈ ವೇಳೆ ನಿರ್ದೇಶಕರಾದ ಮಹೇಶ್ ಕುಮಾರ್, ನಿರ್ಮಾಪಕರಾದ ಉಮಾಪತಿ ನಟ ಶಿವರಾಜ್ ಕೆ.ಆರ್.ಪೇಟೆ ಹಾಜರಿದ್ದರು

ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ನಟನೆಯ ‘ಮದಗಜ’ ಸಿನಿಮಾದ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಅಯೋಗ್ಯ’ ಖ್ಯಾತಿಯ ಮಹೇಶ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್​ ಗೌಡ ಬಂಡವಾಳ ಹೂಡಿದ್ದಾರೆ. ಸದ್ಯ ಹಾಡುಗಳ ಮೂಲಕ ‘ಮದಗಜ’ ಚಿತ್ರ ಭಾರಿ ಸೌಂಡು ಮಾಡುತ್ತಿದೆ. ಈಗ ಚಿತ್ರದ ಟೈಟಲ್​ ಸಾಂಗ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಟ ಶ್ರೀಮುರಳಿ ಅಬ್ಬರಿಸಿದ್ದಾರೆ. ಅವರ ಅಭಿಮಾನಿಗಳಿಗೆ ಈ ಹಾಡು ಸಖತ್​ ಮನರಂಜನೆ ನೀಡುತ್ತಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles