ಬಾಲಿವುಡ್ ನ ಹೆಸರಾಂತ ಫೋಟೋಗ್ರಾಫರ್ ದಬೂ ರತ್ನಾನಿ, ರಾಕಿಂಗ್ ಸ್ಟಾರ್ ಯಶ್ ಅವರ ಫೋಟೋ ಶೂಟ್ ಮಾಡಿದ್ದಾರೆ. ತಮ್ಮ ಟ್ವೀಟರ್ ನಲ್ಲಿ ಯಶ್ ಅವರೊಂದಿಗಿರುವ ಫೋಟೋವನ್ನು ಶೇರ್ ಮಾಡಿದ್ದು ಯಶ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಕೆಜಿಎಫ್ ಚಾಪ್ಟರ್ 2 ಕೆಲಸಗಳೆಲ್ಲ ಮುಗಿದಿದ್ದು ಮುಂದಿನ ವರ್ಷ2022 ಏಪ್ರಿಲ್ ತಿಂಗಳಿನಲ್ಲಿ ತೆರೆಗೆ ಬರುತ್ತಿದೆ.
ಈಗ ಫೋಟೋಗಳು ವೈರಲ್ ಆಗಿರುವುದರಿಂದ ಯಶ್ ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ ಎಂದು ಸುದ್ದಿ ಹರದಾಡುತ್ತಿದೆ, ಇತ್ತೀಚೆಗೆ ಯಶ್ ಮುಂಬಯಿ ನಗರಿಯಲ್ಲಿ ಹೆಚ್ಚೆಚ್ಚು ಕಣಿಸಿಕೊಳ್ಳುತ್ತಿದ್ದದ್ದು ಇದೇ ಕಾರಣಕ್ಕೆ ಇರಬಹುದು ಎಂದೂ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಗುಸು ಗುಸು ಶುರುವಾಗಿದೆ. ಆದರೆ ಈ ಬಗ್ಗೆ ರಾಕಿ ಭಾಯ್ ಕಡೆಯಿಂದ ಯಾವ ಮಾಹಿತಿ ಲಭ್ಯವಿಲ್ಲ, ಅವರ ಸೈಲೆಂಟ್ ನಡೆಗಳು ಕೂಡ ಅಭಿಮಾನಿಗಳ ಕುತೂಹಲ ಹೆಚ್ಚಾಗಲು ಕಾರಣವಾಗಿದೆ.
****