ಪುನೀತ್ ರಾಜಕುಮಾರ್ ಅವರ ನಿಧನದಿಂದಾಗಿ ಅಪ್ಪು ಅಭಿಮಾನಿಗಳು ಸಾಕಷ್ಟು ನೊಂದಿದ್ದಾರೆ, ಇನ್ನು ಕೆಲ ಅಭಿಮಾನಿಗಳು ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೆ ಆತ್ಮಹತ್ಯೆಗೂ ಶರಣಾಗಿದ್ದಾರೆ. ತೆರೆ ಮೇಲೆ ನೋಡುವ ಅಭಿಮಾನಿಗಳಿಗೆ ಹೀಗಾಗಿರುವಾಗ ಇನ್ನು ಪುನೀತ್ ರಾಜಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡಿರುವ ಸ್ಯಾಂಡಲ್ ವುಡ್ ಕಲಾವಿದರಿಗೆ ಇನ್ನೂ ಹೇಗಾಗಿರಬೇಡ ಹೇಳಿ.
ಇಡೀ ಸ್ಯಾಂಡಲ್ ವುಡ್, ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಶೂನ್ಯದಲ್ಲಿ ಮುಳುಗಿದೆ. ಈ ವೇಳೆ ರಾಧಿಕಾ ಪಂಡಿತ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಗಲಿದ ಪುನೀತ್ ರಾಜಕುಮಾರ್ ಅವರನ್ನು ನೆನೆದು ದುಃಖದಿಂದ ಪೋಸ್ಟ್ ಒಂದನ್ನು ಮಾಡಿದ್ದರು
The heart still refuses to accept that you are not here anymore APPU SIR.
This is a void which cannot be filled. Our industry will never be the same without u.
Thank you for giving me the privilege of working with u.
U will be missed immensely.
ನಮಗೆಲ್ಲ ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ ❤ ಎಂದು ಬರೆದುಕೊಂಡಿದ್ದರು.ಮತ್ತು ಪುನೀತ್ ತೀರಿಕೊಂಡ ದಿನವೇ ಅಪ್ಪು ಮನೆಗೆ ಭೇಟಿ ನೀಡಿ ಅವರ ಅಂತಿಮ ದರ್ಶನವನ್ನು ಪಡೆದಿದ್ದರು ಇದು ಯಾವ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿರಲಿಲ್ಲಾ. ಇದರಿಂದ ತಪ್ಪು ತಿಳಿದುಕೊಂಡಿರುವ ಅಪ್ಪು ಅಭಿಮಾನಿಗಳು ರಾಧಿಕಾ ಪಂಡಿತ್ ಪೋಸ್ಟಿಗೆ ಕೆಟ್ಟದಾಗಿ ಮತ್ತು ಅವರನ್ನು ನಿಂದಿಸಿ ಕಮೆಂಟ್ ಮಾಡಿದ್ದಾರೆ. ಅಪ್ಪು ಅಭಿಮಾನಿಗಳ ಕಮೆಂಟ್ಸ್ ಗೆ ಸರಿಯಾಗಿ ಪ್ರತಿಕ್ರಿಯಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ ರಾಧಿಕಾ ಪಂಡಿತ್.

ಜೀವನದಲ್ಲಿ ಆದಷ್ಟು ಒಬ್ಬರ ಮೇಲೆ ಕೋಪ ಇದ್ರು ಪ್ರೀತಿ ಹಂಚಿ, ತಾಳ್ಮೆಯಿರಲಿ.
“ನಾನು ಅಂತಿಮ ದರ್ಶನ ಪಡೆದೆನೋ ಇಲ್ವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ, ನಮಗೆ ತಿಳಿದಿದೆ. ಕ್ಯಾಮೆರಾ ಮುಂದೆ ಬಂದು ಮಾತನಾಡುವ ಶಕ್ತಿ ನನಗಿರಲಿಲ್ಲ. ಕ್ಯಾಮೆರಾ ಮುಂದೆ ಬಂದು ಮಾತನಾಡದೆ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಲಿರಲಿಲ್ಲ. ಅವರ ಮೇಲಿರುವ ಪ್ರೀತಿಗೆ ನೀವು ಹೀಗೆ ಮಾತನಾಡುತ್ತಿರುವುದು ಸಹಜ.
ಅಪ್ಪು ಸರ್ ಅಗಲಿಕೆ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಾದ ನಿಮಗೆ ಎಷ್ಟು ನೋವು ನೀಡುತ್ತಿದೆಯೋ, ಅಷ್ಟೇ ನೋವು ನನಗೂ ನಮ್ಮ ಕುಟುಂಬಕ್ಕೂ ಆಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಅಗಲಿಕೆ ಎಂದೆಂದಿಗೂ ನಮ್ನನ್ನು ಕಾಡುತ್ತಲೇ ಇರುತ್ತದೆ.” ಎಂದು ಅಭಿಮಾನಿಗಳಿಗೆ ಸ್ಪಷ್ಟನೆ ನೀಡುವುದರ ಜೊತೆಗೆ ಕಿವಿಮಾತನ್ನು ಹೇಳಿದ್ದಾರೆ.
ಅಷ್ಟಕ್ಕೂ ಪುನೀತ್ ತೀರಿಕೊಂಡ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ಓಡಿ ಬಂದ ಯಶ್ ಸತತ ಅಂತ್ಯಕ್ರಿಯೆ ಮುಗಿಯುವವರೆಗೂ ದೊಡ್ಮನೆ ದುಃಖದಲ್ಲಿ ಭಾಗಿಯಾಗಿದ್ರು. ಈ ಮಾಧ್ಯಮಗಳ ಅತಿರೇಕಗಳಂತೆಯೇ ಅಭಿಮಾನಿಗಳ ಅತಿರೇಕ ಹೆಚ್ಚಾಗಿದೆ ಎಲ್ಲವನ್ನು ತೋರಿಸಿ ನಾವೇ ಮೊದಲು ಎಂಬ ಧಾವಂತಕ್ಕೆ ಬಿದ್ದರುವ ಮಾಧ್ಯಮಗಳು ಒಂದು ಕಡೆಯಾದ್ರೆ ಮಾಧ್ಯಮದ ಕ್ಯಾಮರಾ ಕಣ್ಣಿನಲ್ಲಿ ಒಬ್ಬ ಸೆಲೆಬ್ರೆಟಿ ಮಿಸ್ ಆದ್ರೂ ಅಂದ್ರೆ ತಮಗೆ ತಾವೇ ಜಡ್ಜ್ಮೆಂಟ್ ಕೊಡುವ ಮಟ್ಟಕ್ಕೆ ಬಂದು ನಿಂತಿದೆ ನೋಡುಗನ ಮನಸ್ಥಿತಿ. ಈ ಅತಿರೇಕಗಳು ನಿಲ್ಲದೆ ಹೋದರೆ ಸಮಾಜದ ಸ್ವಾಸ್ಥ್ಯ ಹಳ್ಳ ಹಿಡಿಯಲು ಹೆಚ್ಚು ಸಮಯ ಬೇಕಾಗಿಲ್ಲಾ.
