‘ಲವ್ ಯೂ ರಚ್ಚು’ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡರು. ‘ಅಪ್ಪು ಸರ್ ನಮ್ಮನ್ನು ಬಿಟ್ಟು ಹೋಗಿಲ್ಲ. ಅವರು ನಮ್ಮ ಜೊತೆಗೆ ಇರುತ್ತಾರೆ. ಅವರ ವಿಚಾರದಲ್ಲಿ ಮರಣ ಎಂಬ ಪದ ಬಳಸೋಕೆ ನಾನು ಇಷ್ಟಪಡಲ್ಲ. ಅವರಿಂದ ಕಲಿಯುವಂತಹ ವಿಷಯ ಸಾಕಷ್ಟಿದೆ. ಮಾತಿನ ಮೂಲಕ ಅವರು ಹೇಳದೇ ಇರಬಹುದು. ಕೆಲಸದ ಮೂಲಕ ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕು. ಅರ್ಥ ಮಾಡಿಕೊಂಡು ಬದುಕಿದರೆ ಜೀವನ ಚೆನ್ನಾಗಿ ಇರುತ್ತದೆ’ ಎಂದು ರಚಿತಾ ರಾಮ್ ಹೇಳಿದ್ದಾರೆ.
ಇದೇ ವೇಳೆ ವೇದಿಕೆ ಮೇಲಿದ್ದ ರಚಿತಾ ರಾಮ್ ಗೆ ನಿರೂಪಕಿ ಒಂದು ವಿಷಯ ಹೇಳ್ತಾರೆ ಮೊದಲೆಲ್ಲಾ ಪ್ರೇಕ್ಷಕರು ಹೀರೋಗಳು ಯಾರು ಎಂದು ನೋಡಿ ಸಿನಿಮಾಗಳಿಗೆ ಬರ್ತಿದ್ರು ಈಗ ರಚಿತಾ ರಾಮ್ ಇದ್ರೆ ಸಾಕು ಸಿನಿಮಾಗಳಿಗೆ ಬರ್ತಾರೆ ಎಂದಾಗ ಅದಕ್ಕೆ ರಚಿತಾ ರಾಮ್ ಪ್ರತಿಕ್ರಿಯಿಸುತ್ತಾ ಹಾಗೆಲ್ಲ ಇಲ್ಲ ಹಿಂದೆ ಮಾಲಾಶ್ರೀ, ಅವರ ಸಿನಿಮಾಗಳಿಗೆ ಬರ್ತಿದ್ರು ನಂತರ ರಕ್ಷಿತಾ, ರಮ್ಯ ಮತ್ತು ರಾಧಿಕಾ ಪಂಡಿತ್ ಅವರ ಚಿತ್ರಗಳಿಗೆ ಬರ್ತಿದ್ರು ಒಂದ್ವೇಳೆ ನನ್ನ ಸಿನಿಮಾಗೂ ಅದೇ ರೀತಿ ಬರ್ತಾರೆ ಅಂದ್ರ ‘ಆಮ್ ಸೋ ಲಕ್ಕಿ’ ಎಂದರು.
‘ಲವ್ ಯೂ ರಚ್ಚು’ ಸಿನಿಮಾದ ಮುದ್ದು ನೀನು ಎಂಬ ರೊಮ್ಯಾಂಟಿಕ್ ಹಾಡೊಂದರ ವಿಡಿಯೋ ಈಗ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ರಚಿತಾ ನಾಯಕ ಅಜೇಯ್ ರಾವ್ ಜೊತೆ ಫಸ್ಟ್ ನೈಟ್ ದೃಶ್ಯದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ರಚಿತಾ ಉಪೇಂದ್ರ ಜೊತೆಗಿನ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡು ಬಳಿಕ ಕಣ್ಣೀರು ಹಾಕಿ ಇನ್ಮುಂದೆ ಇಂತಹ ಪಾತ್ರ ಮಾಡಲ್ಲ ಎಂದಿದ್ದು ವಿವಾದವೇ ಆಗಿತ್ತು. ಆದರೆ ಈಗ ಇಂತಹ ಪಾತ್ರದಲ್ಲಿ ಮಾಡಲ್ಲ ಎಂದಿದ್ದ ರಚಿತಾ ಈ ಸಿನಿಮಾದಲ್ಲಿ ಮತ್ತೆ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರಿಗೆ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದರು.
ಇದಕ್ಕೆ ರಚಿತಾ ‘ಫಸ್ಟ್ ನೈಟ್ ಲ್ಲಿ ನೀವು ಏನು ಮಾಡ್ತೀರಾ? ಸಾಮಾನ್ಯವಾಗಿ ಎಲ್ಲರೂ ಫಸ್ಟ್ ನೈಟ್ ನಲ್ಲಿ ಏನು ಮಾಡ್ತೀರಿ? ಈ ಪ್ರಶ್ನೆ ಕೇಳುತ್ತಿರುವುದಕ್ಕೆ ಐ ಸಾರಿ. ಆದರೂ ಕೇಳುತ್ತಿದ್ದೇನೆ. ಎಲ್ಲರೂ ರೊಮ್ಯಾನ್ಸ್ ಮಾಡ್ತಾರಲ್ವಾ? ಅದನ್ನೇ ಇಲ್ಲಿ ಮಾಡಿದ್ದಾರಷ್ಟೇ. ಆ ರೀತಿ ಮಾಡಲ್ಲ ಎಂದು ಮಾಡಿದ್ದೇನೆ ಎಂದರೆ ಅದಕ್ಕೆ ಏನೋ ಕಾರಣವಿರಬೇಕು ಅಲ್ವಾ? ಅದನ್ನು ನೀವು ಸಿನಿಮಾ ನೋಡಿ ತಿಳಿದುಕೊಳ್ಳಬೇಕು’ ಎಂದು ರಚಿತಾ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ.
****