16.9 C
Bengaluru
Tuesday, February 7, 2023
spot_img

‘ದಾಕ್ಷಾಯಿಣಿಯಾದ’ ಅನುಸೂಯ “ಪುಷ್ಪಾ” ಚಿತ್ರದ ಮತ್ತೊಂದು ಪಾತ್ರ ರಿವೀಲ್

ಅಲ್ಲು ಅರ್ಜುನ್ ಮತ್ತು ರಶ್ಮಿಕ ಮಂದಣ್ಣ ನಟಿಸಿರುವ ಪುಷ್ಟ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಇದೀಗ ಪುಷ್ಟ ಚಿತ್ರ ತಂಡ ಮತ್ತೊಂದು ಪಾತ್ರದಾರಿಯ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ದಾಕ್ಷಾಯಿಣಿ ಪಾತ್ರದಲ್ಲಿ ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಅನುಸೂಯ ಅವರು ನಟಿಸಿದ್ದಾರೆ.

ಆರೋಗೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅನುಸೂಯ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಅನುಸೂಯ ಅವರು ದಾಕ್ಷಾಯಿಣಿ ಲುಕ್ ನಲ್ಲಿ ದುಬಾರಿ ಆಭರಣ, ದುಬಾರಿ ಸೀರೆಯನ್ನು ಉಟ್ಟುಕೊಂಡು ಕೊಡುತ್ತಿರುವ ಫೋಸ್ ನೋಡಿದರೆ ಖಳ ನಾಯಕಿಯ ಪಾತ್ರದಂತೆ ಭಾಸವಾಗುತ್ತದೆ.

ಚಿತ್ರ ಡಿಸೆಂಬರ್ 17ಕ್ಕೆ ರಿಲೀಸ್ ಆಗಲಿದ್ದು ರಿಲೀಸ್ ಗೂ ಮುನ್ನವೇ ಪುಷ್ಟ ಚಿತ್ರದ ಫಸ್ಟ್ ಲುಕ್, ಟೀಸರ್, ಹಾಡುಗಳನ್ನು ನೋಡಿರುವ ಅಭಿಮಾನಿಗಳು ಕುತೂಹಲದಿಂದ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಡಾನ್ಸ್, ಫೈಟ್, ಕಾಮಿಡಿ ಸೇರಿದಂತೆ ಫುಲ್ ಪ್ಯಾಕ್ ಆಗಿರುವ ಈ ಚಿತ್ರದ ಪ್ರಮೋಷನ್ ವರ್ಕ್ ಕೂಡ ಪ್ಲಾನ್ ಪ್ರಕಾರವೇ ಮಾಡಿಕೊಂಡು ಬರುತ್ತಿದೆ ಪುಷ್ಟ ಚಿತ್ರ ತಂಡ.

ಒಟ್ಟಿನಲ್ಲಿ ಪುಷ್ಟಾ ಚಿತ್ರ ಬಿಡುಗಡೆಗೆ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಸೂಪರ್ ಸ್ಟಾರ್ ನಟ, ನಟಿಯರು ಅಭಿನಯಿಸಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳು ಕೂಡ ಗರಿಗೆದರಿವೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles