22.9 C
Bengaluru
Friday, March 24, 2023
spot_img

ಕೊನೆಗೂ “ಸಾರಿ” ಹೇಳ್ಬಿಟ್ರಾ ‘ರಾಗಿಣಿ ದ್ವಿವೇದಿ‘..!

ಅಯ್ಯೋ ಏನಿದು ಸ್ಟೋರಿ, ರಾಗಿಣಿ ಯಾಕೆ ಸಾರಿ ಕೇಳಿದ್ರು..? ಡ್ರಗ್ಸ್ ಕೇಸ್ ವಿಷಯಕ್ಕೇನಾದ್ರು ‘ಸಾರಿ’ ಕೇಳಿದ್ರು ಅನ್ಕೋಂಡ್ರಾ? ನೋ..! ನಿಮ್ಮ ಊಹೆ ತಪ್ಪು ಡ್ರಗ್ಸ್ ಕೇಸ್ ವಿಷಯ ನಮ್ಗ್ಯಾಕೆ, ಸಿಬಿಐ ಉಂಟು, ಕೋರ್ಟ್ ಉಂಟು ಅದರ ಬಗ್ಗೆ ನಾವು ಹೇಳೋಕೇನಿದೆ. ನಾವು ಮಾತಾಡ್ತಿರೋದು, ರಾಗಿಣಿ ದ್ವಿವೇದಿ ಅಭಿನಯದ “ಸಾರಿ” (ಕರ್ಮ ರಿಟರ್ನ್ಸ) ಚಿತ್ರದ ಬಗ್ಗೆ.

ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ “ಸಾರಿ” (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ  ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. “ಸಾರಿ” ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ರಾಗಿಣಿ  ಕಾಣಿಸಿಕೊಳ್ಳಲಿದ್ದಾರೆ.

ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ) ಅಡಿಯಲ್ಲಿ  ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ  ಈ ಚಿತ್ರದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ,ಮಾಚೋಹಳ್ಳಿ ಇರುವ ಲಕ್ಕೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ (ನ 9) ಮಂಗಳವಾರ ನೆರವೇರಿತು.

ಸಕಲೇಶಪುರ, ಬೆಂಗಳೂರು ಹಾಗೂ ಕಗ್ಗಲೀಪುರದ ಸುತ್ತಮುತ್ತ ಸಾರಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಅಫ್ಜಲ್(ಸೂಪರ್‌ಸ್ಟಾರ್) ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಜಾನ್ ಜಾರ್ಜ್ ಹಾಗೂ ಜೈಕೃಪಲಾನಿ ಅವರ ಸಹನಿರ್ಮಾಪಕರು. ಚಿತ್ರಕ್ಕೆ ರಾಜು ಎಮ್ಮಿಗನೂರು ಅವರ ಸಂಗೀತ, ರಾಜೀವ್ ಗಣೇಸನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಲ್ಟಿಮೇಟ್ ಶಿವು ಸಾಹಸನಿರ್ದೇಶನ, ಭೂಪತಿರಾಜ್ ಸಂಕಲನ,  ಇಮ್ರಾನ್, ಮನು ಅವರ  ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ  ಇತರೆ ಪಾತ್ರಗಳಲ್ಲಿ ರಾಗಿಣಿ ಅವರ ಜೊತೆಗೆ ಅಫ್ಜಲ್(ಸೂಪರ್‌ಸ್ಟಾರ್ಸ್) ವಿ.ಜೆ.ಮನೋಜ್, ರಣವೀರ್, ಯುಕ್ತ ಪೆರ್ವಿ, ಪೂಜಾ ಪಾಟೀಲ್   ನಟಿಸುತ್ತಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles