‘ಪ್ರೇಮಂ ಪೂಜ್ಯಂ’ ಚಿತ್ರ ಇದೇ ನವೆಂಬರ್ 12 ರಂದು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದ್ದು ಅದರ ಪ್ರಚಾರ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದ ಸುದ್ದಿಗೋಷ್ಠಿಗೂ ಮುನ್ನ ಪುನೀತ್ ರಾಜಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿನಲಾಯಿತು.
ಭಾವುಕರಾಗಿಯೇ ಮಾತು ಪ್ರಾರಂಭಿಸಿದ ಪ್ರೇಮ್ “ಅಪ್ಪು ಸರ್ ವ್ಯಕ್ತಿತ್ವವನ್ನ ಮಾತಿನಲ್ಲಿ ಹೇಳಿದ್ರೆ ಕಡಿಮೆ ಆಗತ್ತೆ. ಪುನೀತ್ ರಾಜಕುಮಾರ್ ಅವರ ಮೇಲಿನ ಭಾವನೆಗಳನ್ನು ಪದಗಳಲ್ಲಿ ವರ್ಣಿಸೋಕೆ ಆಗೋದಿಲ್ಲಾ. ನಾನು ಮತ್ತು ಅಪ್ಪು ಒಳ್ಳೆಯ ಸ್ನೇಹಿತರು, ಅವರು ಎಷ್ಟೇ ಬ್ಯೂಸಿ ಇದ್ರು ನನಗೋಸ್ಕರ ಸಮಯ ಹೊಂದುಸ್ಕೋತಿದ್ರು, ಪ್ರತಿ ವರ್ಷ ನಾನು ಮತ್ತು ನನ್ನ ಮಕ್ಕಳು ಪುನೀತ್ ಅವರೊಂದಿಗೆ ಶಬರಿಮಲೆಗೆ ಹೋಗ್ತಿದ್ವಿ, ನನ್ನ ಇಬ್ಬರು ಮಕ್ಕಳ ಹುಟ್ಟು ಹಬ್ಬಕ್ಕೆ ತಪ್ಪದೆ ವಿಶ್ ಮಾಡ್ತಿದ್ರು. ನನ್ನ ಮಕ್ಕಳಿಗೂ ಅಪ್ಪು ಸರ್ ಎಂದರೆ ಇನ್ನಿಲ್ಲದ ಪ್ರೀತಿ. ಅವರು ತೀರಿಕೊಂಡಾಗ ನನ್ನ ಮಗಳು ಎರಡು ದಿನ ಊಟ ಮಾಡಿರಲಿಲ್ಲಾ” ಎಂದು ಭಾವುಕರಾದರು.
‘ಪ್ರೇಮಂ ಪೂಜ್ಯಂ’ ಚಿತ್ರ ಇದೇ ನವೆಂಬರ್ 12 ರಂದು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದ್ದು ಅದರ ಪ್ರಚಾರ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದ ಸುದ್ದಿಗೋಷ್ಠಿಗೂ ಮುನ್ನ ಪುನೀತ್ ರಾಜಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿನಲಾಯಿತು. ಡಾ. ರಾಘವೇಂದ್ರ ನಿರ್ದೇಶನದ ‘ಪ್ರೇಮಂ ಪೂಜ್ಯಂ’ ಚಿತ್ರ ನಟ ಪ್ರೇಮ್‌ಗೆ ಹಲವು ರೀತಿಯಲ್ಲಿ ತುಂಬಾ ಸ್ಪೆಷಲ್. ಇದು ಅವರ ಸಿನಿ ಬದುಕಿನ 25ನೇ ಚಿತ್ರ ಎಂಬುದು ಒಂದು ವಿಶೇಷವಾದರೆ, ಇದರಲ್ಲಿ ಅವರು ಮೊದಲ ಬಾರಿಗೆ ಏಳು ಶೇಡ್‌ಗಳಿರುವ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ. ಪ್ರೇಮಕಥೆಯ ಈ ಚಿತ್ರದಲ್ಲಿ ನಾಯಕನ ಜೀವನದ ಹಲವು ಮಜಲುಗಳನ್ನು ಸೆರೆಹಿಡಿಯಲಾಗಿದೆ ಎಂದಿದ್ದಾರೆ ನಿರ್ದೇಶಕರು.
‘ಪ್ರೇಮ್ ಈ ಚಿತ್ರದಲ್ಲಿ ಸುಮ್ಮನೆ ಏಳು ಶೇಡ್‌ನಲ್ಲಿ ಕಾಣಿಸಿಕೊಂಡಿಲ್ಲ. ಪಿಯುಸಿಯಿಂದ ಕಾಲೇಜು, ಕಂಪನಿ ಬಾಸ್ ಆಗುವವರೆಗಿನ ಹೀರೋ ಜೀವನದ ಹಲವು ಹಂತಗಳನ್ನು ವಿಭಿನ್ನವಾಗಿ ತೋರಿಸಿದ್ದೇವೆ. ಪ್ರೇಮ್ ಪ್ರತಿ ಸ್ಟೇಜ್‌ನಲ್ಲೂ ಬೇರೆ ಬೇರೆ ಥರ ಕಾಣಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಶೇಡ್‌ನಿಂದ ಶೇಡ್‌ಗೆ ಒಳ ಲಿಂಕ್ ಇದೆ. ಇದರಲ್ಲಿ ಅವರ ಲುಕ್, ಹಾವಭಾವ, ಸಂಭಾಷಣೆ, ಪ್ರಬುದ್ಧತೆ ಎಲ್ಲವೂ ಬದಲಾಗುತ್ತಾ ಹೋಗುತ್ತವೆ. ಪ್ರತಿ ಸನ್ನಿವೇಶವೂ ಪ್ರಾಮುಖ್ಯತೆ ಹೊಂದಿದ್ದು, ಎಲ್ಲವೂ ಅದ್ಭುತವಾಗಿ ಮೂಡಿಬಂದಿವೆ’ ಎಂದಿದ್ದಾರೆ ಅವರು.