ಸ್ಯಾಂಡಲ್ ವುಡ್ ದುನಿಯಾ ಕೊರೋನಾ ನಂತರ ಮೆಲ್ಲಗೆ ತೆರೆದುಕೊಳ್ಳತ್ತಿದೆ, ಚಿತ್ರಮಂದಿರಗಳ ಪೂರ್ಣ ಭರ್ಥಿಗೆ ಅವಕಾಶ ನೀಡಿದ ಮೇಲೂ ಕೆಲವು ಸಿನಿಮಾಗಳ ನಿರ್ಮಾಪಕರು ತಮ್ಮ ಚಿತ್ರಗಳನ್ನು ರಿಲೀಸ್ ಮಾಡಲು ವಿಳಂಬ ಮಾಡಿದ್ದರು, ಇದಕ್ಕೆ ಕಾರಣ ಸ್ಟಾರ್ ನಟರ ಬಿಗ್ ಬಜೆಟ್ ಚಿತ್ರಗಳ ಜೊತೆ ಬಿಡುಗಡೆ ಮಾಡಿದರೆ ಥಿಯೇಟರ್ ಸಮಸ್ಯೆಯ ಜೊತೆಗೆ, ಸಿನಿ ಪ್ರೇಕ್ಷಕರು ಸ್ಟಾರ್ ಸಿನಿಮಾಗಳ ಹಿಂದೆ ಹೋಗುವುದರಿಂದ ತಮ್ಮ ಚಿತ್ರಕ್ಕೆ ರೆವಿನ್ಯೂ ಕಡಿಮೆಯಾಗುತ್ತದೆ ಎನ್ನುವ ಭಯದಿಂದ ಚಿತ್ರ ಬಿಡುಗಡೆಯನ್ನು ವಿಳಂಬ ಮಾಡಿದ್ದರು.
ಕಳೆದ ತಿಂಗಳು (ಅ.8) ಅಣ್ಣಾವ್ರ ಕುಡಿ ಧನ್ಯಾ ರಾಮ್ ಕುಮಾರ್, ಸೂರಜ್ ಗೌಡ ಅಭಿನಯದ “ನಿನ್ನ ಸನಿಹಕೆ” ಸಿನಿಮಾ ಬಿಡುಗಡೆಗೊಂಡು ಹೌಸ್ ಫುಲ್ ಪ್ರದರ್ಶನ ಕಾಣುವುದರ ಮೂಲಕ ವಿಮರ್ಶಕರ ಮತ್ತು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯಿತು. ನಂತರ ಅಕ್ಟೋಬರ್ 14 ಆಯುಧ ಪೂಜೆಗೆ ಸರಿಯಾಗಿ ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರ ರಿಲೀಸ್ ಆಯ್ತು ಅದೂ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಸಕತ್ ಸೌಂಡ್ ಮಾಡ್ತು, ಅದೇ ದಿನ ಬಿಡುಗಡೆ ಆಗಬೇಕಿದ್ದ ಕಿಚ್ಚ ಸುದೀಪ್ ಅಭಿನಯದ “ಕೋಟಿಗೊಬ್ಬ3″ ಕಾರಣಾಂತರಗಳಿಂದ ಒಂದು ದಿನ ತಡವಾಗಿ ರಿಲೀಸ್ ಆದರೂ ಬಾಕ್ಸ್ ಆಫೀಸ್ ಗಳಿಕೆಯಲ್ಲೇನು ಹಿಂದೆ ಬೀಳ್ಲಿಲ್ಲಾ. ಅಕ್ಟೋಬರ್ ಕೊನೆ ವಾರ ಅಂದರೆ 29 ರಂದು ಭಜರಂಗಿ 2 ಚಿತ್ರ ರಿಲೀಸ್ ಆಗಿ ಮಾರ್ನಿಂಗ್ ಶೋ ಅಷ್ಟರಲ್ಲಿ ಪುನೀತ್ ನಿಧನದ ಸುದ್ದಿಯಿಂದ ಚಿತ್ರ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಅ.29 ಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರವೂ ಬಿಡುಗಡೆ ಆಗಬೇಕಿತ್ತು ಭಜರಂಗಿ 2 ಚಿತ್ರವೂ ಅದೇ ದಿನ ರಿಲೀಸ್ ಆದ ಕಾರಣ ಥಿಯೇಟರ್ ಸಮಸ್ಯೆ ಎದುರಾಗಬಹುದೆಂದು ಪ್ರೇಮಂ ಪೂಜ್ಯಂ ಚಿತ್ರ ರಿಲೀಸ್ ದಿನಾಂಕವನ್ನ ಮುಂದೂಡಿತು.
ಈಗ ನವೆಂಬರ್ ತಿಂಗಳಿನಲ್ಲಿ ಸುಮಾರು 16 ಚಿತ್ರಗಳು ಥಿಯೇಟರ್ ಗೆ ಲಗ್ಗೆ ಇಡಲು ಸಜ್ಜಾಗಿವೆ. ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳು..
ನವೆಂಬರ್ 12
1. ಟಾಮ್ ಅಂಡ್ ಜೆರ್ರಿ
2. ಪ್ರೇಮಂ ಪೂಜ್ಯಂ
3. ಹಿಟ್ಲರ್
4. ಬೈ 1 ಗೆಟ್ 1 ಫ್ರೀ
5. ಕಪೋ ಕಲ್ಪಿತಂ
6. ಯರ್ರಾಬಿರ್ರಿ
ನವೆಂಬರ್ 18
1. ಲಕ್ಷ್ಯ
ನವೆಂಬರ್ 19
1. ಒಂಬತ್ತನೇ ದಿಕ್ಕು
2. ಗರುಡ ಗಮನ ವೃಷಭ ವಾಹನ
3. 100
4. ಮುಗಿಲ್ ಪೇಟೆ
5. ಸ್ನೇಹಿತ
6. ನನ್ನ ಹೆಸರು ಕಿಶೋರ
ನವೆಂಬರ್ 26
1. ಸಖತ್
2. ಅಮೃತಾ ಅಪಾರ್ಟ್ ಮೆಂಟ್ಸ್
3. ಗೋವಿಂದ ಗೋವಿಂದ
ನವೆಂಬರ್ನಲ್ಲಿ ಇಷ್ಟೊಂದು ಸಿನಿಮಾಗಳು ಬಿಡುಗಡೆಯಾಗುತ್ತಿರುವುದಕ್ಕೆ ಡಿಸೆಂಬರ್ನಲ್ಲಿ ಬರಲಿರುವ ದೊಡ್ಡ ಸ್ಟಾರ್ ಸಿನಿಮಾಗಳೂ ಕಾರಣ ಎನ್ನಲಾಗುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ಶ್ರೀಮುರಳಿ ನಟನೆಯ ‘ಮದಗಜ’, ಶರಣ್ ಅವರ ‘ಅವತಾರ ಪುರುಷ’, ಡಾಲಿ ಧನಂಜಯ ನಟನೆಯ ‘ಬಡವ ರಾಸ್ಕಲ್’, ತೆಲುಗಿನ ‘ಪುಷ್ಪ’, ‘ಶ್ಯಾಮ್ ಸಿಂಗ ರಾಯ್’, ಹಿಂದಿಯ ‘83’ ಹೀಗೆ ಹಲವು ದೊಡ್ಡ ಸಿನಿಮಾಗಳು ತೆರೆ ಕಾಣಲಿವೆ. ಆದ್ದರಿಂದ ನವೆಂಬರ್ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಸಂಖ್ಯೆ ಹೆಚ್ಚಿದೆ.
****