ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 11 ದಿನ ಆಗಿದೆ. ಇಂದು 11ನೇ ದಿನದ ಕಾರ್ಯವನ್ನು ಅಣ್ಣಾವ್ರ ಕುಟುಂಬ ನೆರವೇರಿಸಿದೆ. ಇಂದು ಕುಟುಂಬಸ್ಥರಿಗೆ ಮಾತ್ರವೇ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಈಗಾಗಲೇ ರಾಘವೇಂದ್ರ ರಾಜ್ಕುಮಾರ್ ಆದಿಯಾಗಿ ದೊಡ್ಮನೆಯ ಹಲವು ಸದಸ್ಯರು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಮುಂದಾಳತ್ವದಲ್ಲಿ 11 ನೇ ದಿನದ ಕಾರ್ಯ ನೆರವೇರಿದೆ. ರಾಘವೇಂದ್ರ ರಾಜ್ಕುಮಾರ್ ಅವರ ಇಬ್ಬರು ಮಕ್ಕಳು ಬಿರುಸಿನಿಂದ ಓಡಾಡುತ್ತಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಮಕ್ಕಳಾದ ವಂದಿತಾ ಹಾಗೂ ಧೃತಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ವಂದಿತಾಗೆ ಇಂದು ಪರೀಕ್ಷೆ ಇದ್ದು. ಅಪ್ಪನಿಗೆ ಪೂಜೆ ಸಲ್ಲಿಸಿ ವಂದಿತಾ ಪರೀಕ್ಷೆಗೆ ತೆರಳಿದ್ದಾರೆ. ಶಿವರಾಜ್ ಕುಮಾರ್ ದಂಪತಿ ಅವರ ಮಕ್ಕಳು ಸಹ ಸಮಾಧಿ ಪೂಜೆ ಸಲ್ಲಿಸಿದ್ದಾರೆ. ಪಾರ್ವತಮ್ಮ ರಾಜ್ಕುಮಾರ್ ಸಹೋದರ ಚಿನ್ನೇಗೌಡ ಕುಟುಂಬ, ಅವರ ಮಕ್ಕಳಾದ ಶ್ರೀಮುರಳಿ, ರಾಘವೇಂದ್ರ ರಾಜ್ಕುಮಾರ್, ರಾಮ್ ಕುಮಾರ್ ಕುಟುಂಬ. ಅಪ್ಪು ಅವರ ಅಭಿಮಾನಿ ಆಗಿರುವ ನಟಿ, ನಿರೂಪಕಿ, ಅನುಶ್ರೀ ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
****