ಪುನೀತ್ ಇಲ್ಲ ಅನ್ನೋ ಮಾತನ್ನ ಯಾರೂ ನಂಬ್ತಾನೆ ಇಲ್ಲ. ಅವರು ಇಲ್ಲೇ ಇದ್ದಾರೆ ಅನ್ಸುತ್ತೆ. ನಾವು ಈ ಮನೆಗೆ ಎಷ್ಟೋ ಬಾರಿ ಬಂದಿದ್ದು, ಅವರೊಟ್ಟಿಗೆ ಊಟ ಮಾಡಿದ್ದು, ಆ ನೆನಪುಗಳೆಲ್ಲಾ ಹಾಗೇ ಇದೆ. ಒಂದಂತೂ ಹೇಳ್ತಿನಿ, ಪುನೀತ್ ರಾಜ್ ಕುಮಾರ್ ಅನ್ನೋ ವ್ಯಕ್ತಿಗೆ ಸಾವೇ ಇಲ್ಲ ಅಂತಾ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸದಾಶಿವನಗರದ ಪುನೀತ್ ಮನೆಗೆ ಆಗಮಿಸಿದ್ದ ಸುಮಲತಾ, ಮಾಧ್ಯಮಗಳ ಜೊತೆ ಮಾತನಾಡಿ ಅವರು ಶಾಶ್ವತ್ವಾಗಿನ ನಮ್ಮೆಲ್ಲರ ಹೃದಯದಲ್ಲಿ ಹಾಗೇ ಉಳಿದುಕೊಂಡಿದ್ದಾರೆ. ಪುನೀತ್ ಇಲ್ಲ ಅನ್ನೋ ಮಾತು ಹೇಳಂಗೇ ಇಲ್ಲ. ಅವರು ನಮ್ಮೊಟ್ಟಿಗೇ ಇದ್ದಾರೆ ಅನ್ನೋ ಭಾವನೆ ಅಭಿಮಾನಿಗಳಲ್ಲಿ ನಮ್ಮಲ್ಲಿ ಇನ್ನೂ ಹಾಗೇ ಇದೆ. ಅವರು ಗಳಿಸಿರುವಷ್ಟು ಪ್ರೀತಿಯನ್ನ ನೋಡುವಾಗ ಮಾತುಗಳೇ ಇಲ್ಲ. ಇವತ್ತಿನವರೆಗೂ ಜನ ಸಾಗರ ಅವರ ಸಮಾಧಿಯನ್ನ ನೋಡೋದಕ್ಕೆ ಬರ್ತಿದೆ ಅಂದ್ರೆ ಅವರು ನಿಜವಾಗಿಯೂ ದೇವರ ಮಗಾನೇ. ಪುನೀತ್ ಯಾವತ್ತಿಗೂ ಅಮರ ಎಂದು ಭಾವಕರಾದ್ರು.
****