23.8 C
Bengaluru
Thursday, December 8, 2022
spot_img

ಪುನೀತ್ ಅಂತಹ ವ್ಯಕ್ತಿ ಮತ್ತೊಬ್ಬರಿಲ್ಲ: ನಟ ಸಿದ್ದಾರ್ಥ್

ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿ ಬಳಗ ದೊಡ್ಡದು, ಅವರ ವ್ಯಕ್ತತ್ವಕ್ಕೆ ಮಾರುಹೋಗದವರಿಲ್ಲಾ, ಆ ಸಾಲಿಗೆ ತಮಿಳು​ ನಟ ಸಿದ್ದಾರ್ಥ್​ ಕೂಡ ಸೇರುತ್ತಾರೆ. ಪುನೀತ್​ ನಿಧನರಾಗಿ ಇಂದಿಗೆ (ನ.8) 11 ದಿನವಾಗಿದ್ದು, ಕುಟುಂಬದವರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ತಮಿಳು ನಟ ಸಿದ್ದಾರ್ಥ್​ ಕೂಡ ಅಪ್ಪು ಸಮಾಧಿಗೆ ನಮನ ಸಲ್ಲಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಪುನೀತ್ ಅವರ ವ್ಯಕ್ತತ್ವ ನೆನೆದು ಕಣ್ಣೀರಾಕ್ಕಿದ್ದಾರೆ.

‘ಇಂದು ಅಪ್ಪು ಇಲ್ಲದೇ 11 ದಿನ ಆಗಿದೆ. ಆದರೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್​ ಇಲ್ಲ ಎಂಬುದನ್ನು ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ. ಅವರು ಇದ್ದಾರೆ, ಯಾವಾಗಲೂ ಇರುತ್ತಾರೆ ಎನ್ನುತ್ತೇನೆ. ಅವರದ್ದು ಮಹಾನ್​ ವ್ಯಕ್ತಿತ್ವ. ತುಂಬ ಪ್ರತಿಭಾವಂತ. ಪ್ರತಿ ಬಾರಿ ಅವರನ್ನು ಭೇಟಿ ಆದಾಗಲೂ ನಾನು ಲಕ್ಕಿ ಎಂದುಕೊಳ್ಳುತ್ತಿದ್ದೆ. ಅವರು ಎಲ್ಲರ ಕಾಳಜಿ ವಹಿಸುತ್ತಿದ್ದರು. ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದರು. ಪುನೀತ್ ರೀತಿ ಇನ್ನೋರ್ವ ವ್ಯಕ್ತಿ​ ಇರಲು ಸಾಧ್ಯವಿಲ್ಲ. ಕುಟುಂಬದವರಿಗೆ, ಕೋಟ್ಯಂತರ ಅಭಿಮಾನಿಗಳಿಗೆ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ. ನಾನು ಕೂಡ ಪುನೀತ್​ ರಾಜ್​ಕುಮಾರ್​ ಫ್ಯಾನ್​’ ಎಂದಿದ್ದಾರೆ ಸಿದ್ದಾರ್ಥ್​.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles