ಇಂದು ಪುನೀತ್ ರಾಜಕುಮಾರ್ ಅವರ 11 ನೇ ದಿನದ ಪೂಜಾ ಕಾರ್ಯ ನೆರೆವೇರಿದ್ದು. ಅಣ್ಣಾವ್ರ ಕುಟುಂಬಸ್ಥರೆಲ್ಲರೂ ಸೇರಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಮುಂದಾಳತ್ವದಲ್ಲಿ 11 ನೇ ದಿನದ ಕಾರ್ಯ ನೆರವೇರಿದೆ.
11ನೇ ದಿನವೂ ಕೂಡ ಪುನೀತ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ರು. ಅಪ್ಪು ಸಮಾಧಿಗೆ ನಮಿಸಲು ಗೇಟಿನ ಬಳಿಯೇ ಕಾಯುತ್ತಿದ್ರು, ಆದ್ರೆ ದೊಡ್ಮನೆ ಕುಟುಂಬಸ್ಥರ ಪೂಜಾ ಕಾರ್ಯ ಮುಗಿಯುವವರೆಗೂ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅಪ್ಪು ಸಮಾಧಿಗೆ ನಮಿಸಲು ಪುನೀತ್ ತೀರಿಕೊಂಡ 11ನೇ ದಿನವೂ (ಪುಣ್ಯ ಸ್ಮರಣೆ) ಅವರ ಅಭಿಮಾನಿಗಳ ಅಭಿಮಾನ ಮಾತ್ರ ನಿಂತಿಲ್ಲಾ ದಿನೇ ದಿನೇ ಅಪ್ಪು ಸಮಾಧಿಗೆ ಭೇಟಿ ನೀಡಲು ಅಭಿಮಾನಿಗಳ ದಂಡು ಬರುತ್ತಲೇ ಇದೆ.
ದೊಡ್ಮನೆ ಕುಟುಂಬಸ್ಥರ ಪೂಜಾ ಕಾರ್ಯವೆಲ್ಲ ಮುಗಿದಿದ್ದು, ಬೆಳಗ್ಗಿನಿಂದ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿರ್ಭಂಧವನ್ನು ತೆರುವುಗೊಳಿಸಿ, ಅಪ್ಪು ಅಭಿಮಾನಿಗಳಿಗೆ ಸಮಾಧಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ ಬೆಳಗ್ಗಿನಿಂದ ಗೇಟ್ ಬಳಿ ಕಾಯುತ್ತಿದ್ದ ಅಭಿಮಾನಿಗಳಿಗೆ ಶಿವಣ್ಣ ಸಿಹಿ ಹಂಚಿದ್ದಾರೆ.
****