ಹುಟ್ಟು ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆ ಬೆಳೆಯುತ್ತಾ ದಾಯಾದಿಗಳು ಎನ್ನುವ ಗಾದೆ ಮಾತಿಗೆ ತದ್ವಿರುದ್ದವಾದ ಸಂಬಂಧ ಎಂದರೆ ಅದು ದೊಡ್ಮನೆ ಮಕ್ಕಳ ಅಣ್ಣ ತಮ್ಮಂದಿರ ಸಂಬಂಧ. ಅಣ್ಣ ತಮ್ಮಂದಿರ ಬಾಂಧವ್ಯವೇ ಅಣ್ಣಾವ್ರ ಕುಟುಂಬದ ಶಕ್ತಿ. ಅಣ್ಣ ತಮ್ಮಂದ್ರು ಅಂದ್ರೆ ಹಿಂಗಿರ್ಬೇಕಪ್ಪಾ ಅನ್ನೋವಷ್ಟು ಆತ್ಮೀಯತೆ.
ಇಂದು ಅಪ್ಪು ಅವರ 11 ನೇ ದಿನದ ಪೂಜಾ ಕಾರ್ಯದಲ್ಲಿ ಪುನೀತ್ ಅಣ್ಣಂದಿರಾದ ರಾಘಣ್ಣ ಮತ್ತು ಶಿವಣ್ಣ ಭಾವುಕರಾದ ಕ್ಷಣವೇ ಸಾಕ್ಷಿ. ತಮಗಿಂತ ಕಿರಿಯನಾದ ತಮ್ಮ ಪುನೀತ್ (46) ನನ್ನು ಕಳೆದುಕೊಂಡು ಸಾಕಷ್ಟು ನೋವಿನಲ್ಲಿರುವ ಅಣ್ಣಂದಿರು ಅಂತಿಮ ಪೂಜಾ ಕಾರ್ಯಗಳನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಅತೀ ಭಾವುಕರಾಗಿದ್ದ ಶಿವಣ್ಣ ತಮ್ಮ ಅಪ್ಪುವನ್ನು ನೆನೆದು ಕಣ್ಣೀರಾಕ್ಕಿದ್ದಾರೆ. ಮನಸ್ಸಿನಲ್ಲಿ ಎಷ್ಟೋಂದು ನೋವಿದ್ದರೂ ರಾಘಣ್ಣ ಮೊದಲ ದಿನದಿಂದಲೂ ಅಭಿಮಾನಿಗಳಿಗೆ, ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಆದರೂ ಅವರಿಗೂ ಪ್ರೀತಿ ತಮ್ಮ ಅಪ್ಪು ವನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ.