ಕನ್ನಡ ಕಿರುತೆರೆಯ ನಿರೂಪಕಿ ಅನುಶ್ರೀ ಇಂದು ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ ಕಾರ್ಯದಲ್ಲಿ ಭಾಗವಹಿಸಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ನಟ ಅಪ್ಪುವನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಅನುಶ್ರೀ ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ನಾನು ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿ ಎಂದು ಹೇಳುತ್ತಿದ್ದರು. ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಅಭಿಮಾನದ ಹೊಗಳಿಕೆಯ ಹೊಳೆಯನ್ನೆ ಹರಿಸುತ್ತಿದ್ದರು. ಆದರೆ ಪುನೀತ್ ರಾಜಕುಮಾರ್ ತೀರಿಕೊಂಡ ಸಂದರ್ಭದಲ್ಲಿ ಅವರ ಅಂತಿಮ ದರ್ಶನಕ್ಕೆ ಆಂಕರ್ ಅನುಶ್ರೀ ಬಂದಿರಲಿಲ್ಲಾ ಇದರಿಂದ ಹೆಚ್ಚು ಟೀಕೆಗೂ ಒಳಗಾಗಿದ್ದರು. ಆದರೆ ತಮಗೆ ಪವರ್ ಸ್ಟಾರ್ ಅಪ್ಪುವನ್ನು ಆ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗದ ಕಾರಣ ಬಂದಿರಲಿಲ್ಲ ಎಂದು ಅನುಶ್ರೀ ದುಃಖದಿಂದಲೇ ಹೇಳಿಕೊಂಡಿದ್ದರು.
ಇಂದು ಅಣ್ಣಾವ್ರ ಕುಟುಂಬಸ್ಥರಿಂದ ಪುನೀತ್ ರಾಜಕುಮಾರ್ ಅವರ 11ನೇ ದಿನದ ಪೂಜಾ ಕಾರ್ಯ ನೆರವೇರಿದ್ದು ಈ ವೇಳೆ ಅನುಶ್ರೀ ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
****