ಇಂದು ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಪುನೀತ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಅವರು, ಪುನೀತ್ ಜೊತೆಗಿನ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ. ‘‘ಇನ್ನು ಆ ಶಾಕ್ ಇಂದ ಹೊರಗೆ ಬಂದೇ ಇಲ್ಲ. ಅವರ ಬ್ಲೆಸ್ಸಿಂಗ್ಸ್ ಯಾವತ್ತೂ ಇದೆ ನಮ್ಮ ಮೇಲೆ’’ ಎಂದು ನುಡಿದಿದ್ದಾರೆ.
ಇದೇ ವೇಳೆ ಅವರು, ಪುನೀತ್ ತಮ್ಮ ಸಿನಿಮಾಗೆ ಹಾಡು ಹಾಡಬೇಕಿತ್ತು. ಅದರ ಮಾತುಕತೆ ಕೂಡ ಆಗಿತ್ತು ಎಂದು ನುಡಿದಿದ್ದಾರೆ. ‘‘ನನ್ನ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು. ಆದರೆ ಈಗ ಅವರು ಇಲ್ಲ ಅಂದ್ರೆ ನಂಬೋಕೇ ಆಗುತ್ತಿಲ್ಲ. ಮಾತುಕತೆಯಾಗಿ 6 ತಿಂಗಳಾಗಿತ್ತು. ಲಾಸ್ಟ್ ಟೈಮ್ ಅದರ ಬಗ್ಗೆ ಮಾತನಾಡಬೇಕಿತ್ತು, ಆದರೆ ಆಗಲಿಲ್ಲ. ಶೀಘ್ರವೇ ಆ ಹಾಡು ರಿಲೀಸಾಗುತ್ತೆ. ಮೀಟ್ ಮಾಡಬೇಕಿತ್ತು, ತುಂಬಾ ವಿಚಾರ ಮಾತನಾಡಬೇಕಿತ್ತು. ಆದರೆ ಆಗಲಿಲ್ಲ, ಬೇಜಾರಾಗುತ್ತಿದೆ’’ ಎಂದು ವಿಕ್ರಮ್ ದುಃಖ ವ್ಯಕ್ತಪಡಿಸಿದ್ಧಾರೆ.
****