ನಟ ಪುನೀತ್ ಅಗಲಿ ಏಳು ದಿನ ಕಳೆದರೂ ದಕ್ಷಿಣ ಭಾರತದ ಸಿನಿ ದಿಗ್ಗಿಜರು ಭೇಟಿ ನೀಡಿ ಕಂಬನಿ ಮಿಡಿಯುತ್ತಿರುವುದು ಕಡಿಮೆಯಾಗುತ್ತಿಲ್ಲ. ತಮಿಳು ನಟ ಸೂರ್ಯ, ತೆಲಗು ನಟ ರಾಜೇಂದ್ರ ಪ್ರಸಾದ್ ಸೇರಿದಂತೆ ಗಣ್ಯರು ಪುನೀತ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಪುನಿತ್ ರಾಜ್ ಕುಮಾರ್ ನಿಧನ ಹಿನ್ನೆಲೆ ಸದಾಶಿವನಗರದ ಪುನೀತ್ ನಿವಾಸಕ್ಕೆ ನಟಿ ಪ್ರಿಯಾಮಣಿ ಭೇಟಿ ನೀಡಿದರು. ನಂತರ ಪುನೀತ್ ಪತ್ನಿ ಅಶ್ವಿನಿರಿಗೆ ಸಾಂತ್ವನ ಹೇಳಿದರು. ಪುನೀತ್ ರಾಜ್ಕುಮಾರ್ ಜೊತೆ ರಾಮ್, ಅಣ್ಣಾಬಾಂಡ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ಪ್ರಿಯಾಮಣಿ ಅವರು ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಅಲ್ಲದೆ, ಸಾಯುವ ವಯಸ್ಸು ಅವರದ್ದಾಗಿರಲಿಲ್ಲ, ಅವರಿಗೆ ಆರೋಗ್ಯ ಸಮಸ್ಯೆಯೂ ಇರಲಿಲ್ಲ, ಇವರ ನಿಧನದ ಸುದ್ದಿ ಇಡೀ ಚಿತ್ರರಂಗಕ್ಕೆ ತುಂಬಲಾರದ ದೊಡ್ಡ ನಷ್ಟ ಎಂದರು. ದೇವರು ಅಭಿಮಾನಿಗಳಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವಂತಹ ಶಕ್ತಿ ಕೊಡಲಿ ಎಂದರು.
****