ನಟ ಪುನೀತ್ ರಾಜಕುಮಾರ್ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಅಭಿಮಾನಿಯ ಕುಟುಂಬಕ್ಕೆ ನಟ ರಾಘವೇಂದ್ರ ರಾಜಕುಮಾರ್ ಸಾಂತ್ವನ ಹೇಳಿದ್ದಾರೆ. ಪುನೀತ್ ಅಭಿಮಾನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಚನ್ನಪಟ್ಟಣದ ಎಲೆಕೇರೆಯಲ್ಲಿ ಘಟನೆ ನಡೆದಿತ್ತು. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಡಾವಣೆಯಲ್ಲಿ ಕಳೆದ 4 ನೇ ತಾರೀಕಿನಂದು ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದರು. 25 ವರ್ಷದ ವೆಂಕಟೇಶ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದ ಪುನೀತ್ ಅಭಿಮಾನಿ.
ಪುನೀತ್ ರಾಜಕುಮಾರ್ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಅಭಿಮಾನಿಯೊಬ್ಬರು ಮೃತಪಟ್ಟಿದ್ದರು, ನಂತರ ಅಪ್ಪು ಸಾವು ಅವರ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿದ್ದು ಅನ್ನ, ನೀರು ಬಿಟ್ಟು, ನೀರಿಗೆ ಹಾರಿ, ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ. ಮೊದಲೇ ಪುನೀತ್ ಸಾವಿನ ದುಃಖದಲ್ಲಿರುವ ದೊಡ್ಮನೆ ಕುಟುಂಬಕ್ಕೆ ಅಪ್ಪು ಅಭಿಮಾನಿಗಳ ಆತ್ಮಹತ್ಯೆ ಮತ್ತಷ್ಟು ನೋವು ತರಿಸಿದೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ಶಿವಣ್ಣ ಮತ್ತು ರಾಘಣ್ಣ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರಂತೂ ಪುನೀತ್ ತೀರಿಕೊಂಡ ದಿನವೇ ಮಾಧ್ಯಮದ ಮುಂದೆ ಬಂದು ಅಭಿಮಾನಿಗಳಲ್ಲಿ ಕಳಕಳಿಯಿಂದ ಮನವಿ ಮಾಡಿದ್ರು ಯಾರೂ ಕೂಡ ಸಂಯಂಮ ಕಳೆದುಕೊಳ್ಳಬೇಡಿ ಅಪ್ಪುವನ್ನು ಪ್ರೀತಿಯಿಂದ ಕಳುಹಿಸಿಕೊಡೋಣ ಎಂದಿದ್ದರೂ.
****