ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಅವರ ಸಾವಿಗೆ ಕಂಬನಿ ಮಿಡಿಯದ ಹೃದಯವೇ ಇಲ್ಲವೆನ್ನಬಹುದು ಕನ್ನಡ ಚಿತ್ರರಂಗವಲ್ಲದೆ ಇತರೆ ಭಾಷೆಯ ಚಿತ್ರರಂಗದವರು ಕೂಡ ಅಪ್ಪು ಸಾವಿಗೆ ಕಂಬನಿ ಮಿಡಿದಿದ್ದಾರೆ. ಬಹುಭಾಷಾ ನಟಿ ಜಯಪ್ರದ ಅವರು ಪುನೀತ್ ಮನೆಗೆ ಭೇಟಿ ನೀಡಿ ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
‘ರಾಜ್ ಕುಟುಂಬದಲ್ಲಿ ನಾನು ಕೂಡ ಸದಸ್ಯಳಾಗಿದ್ದೆ. ತುಂಬಾ ಚಿಕ್ಕವಯಸ್ಸಿನಲ್ಲೇ ನಮ್ಮನ್ನೆಲ್ಲಾ ಬಿಟ್ಟು ಪುನೀತ್ ಹೋಗಿರೋದು ದುರಂತ. ಮನಸ್ಸಿಗೆ ತುಂಬಾ ಕಷ್ಟ ಆಗ್ತಿದೆ. ಅಪ್ಪು ಸಾವು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ’ ಎಂದು ಭಾವುಕರಾದರು.
****