‘100’ ಸಿನಿಮಾ ಸೈಬರ್ ಕ್ರೈಮ್ ಆಧರಿತ ಸಿನಿಮಾವಾಗಿದೆ. ರಮೇಶ್ ಅರವಿಂದ್ ಜೊತೆ ರಚಿತಾ ರಾಮ್, ಪೂರ್ಣಾ ನಟಿಸಿದ್ದು ಇದು ಫ್ಯಾಮಿಲಿ ಥ್ರಿಲ್ಲರ್ ಜಾನರ್‌ನ ಸಿನಿಮಾವಾಗಿದೆ. ವಿಶೇಷ ಎಂದರೆ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಇಂದಿನ ಆಧುನಿಕ ಪ್ರಪಂಚಕ್ಕೆ, ಮೊಬೈಲ್ ಯುಗಕ್ಕೆ ಹೇಳಲೇಬೇಕಾದ ಒಂದು ಕಥೆಯನು ತೆರೆ ಮೇಲೆ ತರಲು ರಮೇಶ್ ಅರವಿಂದ್ ಹೊರಟಿದ್ದಾರೆ. 100 ಇದೇ ನವೆಂಬರ್ 19ಕ್ಕೆ ರಿಲೀಸ್ ಆಗುತ್ತಿದೆ.
ಇಂದು ಎಸ್ ಆರ್ ವಿ ಥಿಯೇಟರ್ ನಲ್ಲಿ ‘100’ ಚಿತ್ರದ ಸುದ್ದಿಘೋಷ್ಠಿ ನಡೆಯಿತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಿ ನಂತರ ರಮೇಶ್ ಅರವಿಂದ್ ತಮ್ಮ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
“ಇದು ಪೊಲೀಸ್ ಆಫೀಸರ್ ಕಥೆ, ಇದು ಫ್ಯಾಮಿಲಿ ಕಥೆ, ಅಪರಿಚಿತರು ಚಾಕೊಲೇಟ್ ಕೊಟ್ಟರೆ ತಗೆದು ಕೊಳ್ಳಬಾರದು ಎಂದು ಅಪ್ಪ ಅಮ್ಮ ಮಕ್ಕಳಿಗೆ ಹೇಳುತ್ತಾರೆ. ಆದರೆ ಈಗ ನಮಗೆ ಗೊತ್ತಿಲ್ಲದೆ ಅಪರಿಚಿತರು ನಮ್ಮ ಮೊಬೈಲ್ ಮೂಲಕ ಮನೆ ಒಳಗೆ ಬರುತ್ತಿದ್ದಾರೆ. ನಮ್ಮ ಮಕ್ಕಳಿಗೆ ಏನೇನೋ ಚಾಕೊಲೇಟ್ ಕೊಡುತ್ತಾರೆ. ನಮಗೆ ಅದರ ಅರಿವು ಇರುವುದಿಲ್ಲ. ಮನೆಯಲ್ಲಿ ನಾಲ್ಕು ಜನ ಇದ್ದರೆ, ಎಲ್ಲರಿಗೂ ಒಂದು ಮೊಬೈಲ್ ಇರುತ್ತದೆ. . ಎಲ್ಲರೂ ಏನೇನೋ ಮಾಡುತ್ತಿರುತ್ತಾರೆ. ಮನೆಗೆ ಬೀಗ ಹಾಕಿದ್ದರು, ಮೊಬೈಲ್ ಮೂಲಕ ಮನೆಯ ಒಳಗೆ ಕಳ್ಳರು ಬಂದು ಬ್ರೇನ್ ವಾಶ್ ಮಾಡುತ್ತಾರೆ. ನಾವು ಮಕ್ಕಳಿಗೆ ಹೇಳಿ ಕೊಟ್ಟ ಮೌಲ್ಯವನ್ನು ಬ್ರೇಕ್ ಮಾಡುತ್ತಿದ್ದಾರೆ. ಅದನ್ನ ಮನೆ ಮಾಲೀಕ ಹೇಗೆ ಬ್ರೇಕ್ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ’ ಎಂದು ಚಿತ್ರದ ಬಗ್ಗೆ ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ.
****