ಬಹುಭಾಷಾ ನಟ ಕಿಶೋರ್ ಅವರು ಅಪ್ಪುವನ್ನ ನೆನೆದು ಬಾವುಕರಾಗಿದ್ದಾರೆ. ಆಕಾಶ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜೊತೆ ಅಭಿನಯಿಸಿರುವ ಕಿಶೋರ್ ಗೆ ಪುನೀತ್ ಅವರೊಂದಿಗೆ ಹೆಚ್ಚಿನ ಒಡನಾಟವೇನು ಇಲ್ಲಾ ಆದರೂ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವವ ಅವರ ನಿಷ್ಕಲ್ಮಷ ನಗು ಎಂತವರ ಮನಸ್ಸನ್ನು ಗೆಲ್ಲುವಂತಿತ್ತು ಎಂದಿದ್ದಾರೆ. ಕನ್ನಡ ಪಿಚ್ಚರ್ ನೊಂದಿಗೆ ನಟ ಕಿಶೋರ್ Exclusive
ಆ ನಗು ಸುಮ್ಮನೆ ಬರುವಂತಾದ್ದಲ್ಲಾ ಆ ನಗುವೇ ಅವರ ವ್ಯಕ್ತಿತ್ವವನ್ನು ಸಾರುವಂತಿತ್ತು, ಒಬ್ಬ ನಟನಾಗಿ ತುಂಬ ಎತ್ತರಕ್ಕೆ ಬೆಳೆದಂತ ಪುನೀತ್ ಇನ್ನಷ್ಟು ಸಾದ್ಯತೆಗಳನ್ನ ಭರವಸೆಯನ್ನ ನಮ್ಮ ನಡುವೆ ಮೂಡಿಸಿದ್ರು, ಈಗ ಅವರಿಲ್ಲಾ ಎನ್ನುವ ನೋವು, ನಮ್ಮನೆಲ್ಲಾ ತುಂಬಾ ದಿನ ಕಾಡುತ್ತದೆ. ಇವತ್ತಿಗೂ ದಿಗ್ಭ್ರಮೆಯಿಂದ ಹೊರಬರಲಾಗುತ್ತಿಲ್ಲಾ, ಹೊರಗೆ ಅವರ ಪೋಸ್ಟರ್ ನೋಡಿದ್ರೆ ತುಂಬಾ ಕಷ್ಟ ಅನ್ಸತ್ತೆ, ಯಾಕೀಗಾಯ್ತು, ಇದನ್ನ ತಡಿಬಹುದಿತ್ತಾ ಅನ್ನುವ ವಿಚಾರಗಳೇ ತಲೆಯಲ್ಲಿ ಓಡ್ತಿರತ್ತೆ. ಯಾಕಿಷ್ಟು ಎಲ್ಲರು ನೋವಿನಲ್ಲಿದ್ದಾರೆ ಅಂದ್ರೆ ಅದಕ್ಕೆ ಕಾರಣ ಅವರ ಸಿನಿಮಾಗಳು, ಅವರ ವ್ಯಕ್ತಿತ್ವ ಕಾರಣ ಅಂತೇಳ್ಬೋದು.
ಪುನೀತ್ ಅವರನ್ನು ಕಳೆದುಕೊಳ್ಳುವ ಮೂಲಕ ಅದೆಷ್ಟೋ ಸಾದ್ಯತೆಯನ್ನ ಕಳೆದುಕೊಂಡಿದ್ದೇವೆ, ಹಲವು ಜನಗಳ ಜೀವನವನ್ನ ಬದಲಾಯಿಸುವ ಶಕ್ತಿ ಇದಂತ ಜೀವ, ನನಗೆ ವಜ್ರೇಶ್ವರಿ ಕಂಬೈನ್ಸ್ ಮೂಲಕವೆ ತೆಲುಗು ಚಿತ್ರರಂಗದಲ್ಲಿ ಬೇರೆ ಬೇರೆ ಅವಕಾಶಗಳು ಸಿಕ್ಕಿದ್ದು, ಆಕಾಶ್ ಚಿತ್ರದ ಮೂಲಕ ಅದು ಸಾಧ್ಯವಾಯಿತು. ಎಂದು ಬಾವುಕರಾದರು
****