ಸಾಗರ ಪುರಾಣಿಕ ನಿರ್ದೇಶನದ, ವಡೆಯರ್ ಮೂವೀಸ್ ನ ಪ್ರಪ್ರಥಮ ಚಿತ್ರ “ಡೊಳ್ಳು” ಪ್ರತಿಷ್ಟಿತ ಭಾರತೀಯ ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಆಗಿದೆ. ಇತ್ತೀಚೆಗೆ ದಾದಾ ಸಾಹೇಬ್ ಪಾಲ್ಕೆ ಅಕಾಡಮಿ ಪ್ರಶಸ್ತಿ ಪಡೆದು ಸಂಭ್ರಮದಲ್ಲಿದ್ದ ತಂಡಕ್ಕೆ ಪನೋರಮಾ ಚಿತ್ರೋತ್ಸವದಲ್ಲಿ ಡೊಳ್ಳು ಪ್ರದರ್ಶನಗೊಳ್ಳುತ್ತಿರುವುದು ಮತ್ತಷ್ಟು ಸಂತಸ ತರಿಸಿದೆ.
ಗೋವಾದಲ್ಲಿ ನಡೆಯಲಿರುವ 52 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಭಾರತೀಯ ಪನೋರಮಾ ವಿಭಾಗದಲ್ಲಿ 25 ಫೀಚರ್ ಮತ್ತು 20 ನಾನ್‌ಫೀಚರ್ ಚಿತ್ರಗಳು ಆಯ್ಕೆಯಾಗಿವೆ. ಈ ಚಿತ್ರಗಳನ್ನು ಗೋವಾದಲ್ಲಿ ನವೆಂಬರ್ 20 ರಿಂದ 28 ರವರೆಗೆ ಪ್ರದರ್ಶಿಸಲಾಗುವುದು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಗೋವಾ ಸರ್ಕಾರದ ಸಹಭಾಗಿತ್ವದಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಿದೆ. ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ, ಕನ್ನಡದ 4 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
ಸಾಗರ ಪುರಾಣಿಕ ನಿರ್ದೇಶನದ ‘ಡೊಳ್ಳು’, ಪ್ರವೀಣ ಕೃಪಾಕರ ಅವರ ‘ತಲೆದಂಡ’, ಮನಸೊರೆ ನಿರ್ದೇಶನದ ‘ಆಕ್ಟ್ 1978’ ಮತ್ತು ಗಣೇಶ ಹೆಗಡೆ ನಿರ್ದೇಶನದ ‘ನೀಲಿ ಹಕ್ಕಿ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.