ಡಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಇಂದು ಪುನೀತ್ ರಾಜಕುಮಾರ್ ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದು, ನಮನ ಸಲ್ಲಿಸಿದ್ದಾರೆ.ಮಾಸ್ಟರ್ ಇಮ್ರಾನ್ ಸರ್ದಾರಿಯಾ ಅಭಿಮಾನಿಗಳ ನಡುವೆಯೇ ಸಾಲಿನಲ್ಲಿ ಆಗಮಿಸಿ ದರ್ಶನ ಪಡೆದರು. ನಂತರ ಮಾತನಾಡಿದ ಅವರು, ಪುನೀತ್ ಜೊತೆಗಿನ ನೆನಪುಗಳನ್ನು ಸ್ಮರಿಸಿಕೊಂಡರು.
‘‘ಮೊದಲನೆಯದಾಗಿ ಅವರು ಇಲ್ಲ ಅನ್ನುವುದನ್ನೇ ನಾನು ಒಪ್ಪುವುದಿಲ್ಲ. ಅವರು ಎಂದಿಗೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅಪ್ಪು ಜೊತೆ ಸಾಕಷ್ಟು ಸಮಯ ಕಳೆದಿದ್ದೇನೆ, ಅವರು ಯಾರನ್ನೂ ಕೀಳಾಗಿ ಕಂಡವರಲ್ಲ. ಈ ಘಟನೆಗೂ 1 ವಾರ ಮುಂಚೆ ಅವರನ್ನ ಭೇಟಿಯಾಗಿ ಗೋವಾಗೆ ತೆರಳಿದ್ದೆ. ಕರೆ ಮಾಡಿದಾಗ ಬಂದ ತಕ್ಷಣ ಭೇಟಿಯಾಗಲು ಹೇಳಿದ್ದರು.ಆದರೆ ಈ ರೀತಿ ಅವರನ್ನು ಬಂದು ನೋಡಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನಗೆ ಈ ಸಂದರ್ಭದಲ್ಲಿ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ’’ ಎಂದು ಇಮ್ರಾನ್ ಸರ್ದಾರಿಯಾ ಕಂಬನಿ ಮಿಡಿದಿದ್ದಾರೆ.
****