31.5 C
Bengaluru
Tuesday, March 28, 2023
spot_img

ಪುನೀತ್ ಸಮಾಧಿ ಬಳಿ ತಮಿಳು ನಟ ಸೂರ್ಯ ಕಣ್ಣೀರು..!

ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಸ್ಯಾಂಡಲ್​ವುಡ್​ ನಲ್ಲಿ ದೊಡ್ಡ ಶೂನ್ಯ ಆವರಿಸಿದೆ. ಅಷ್ಟೇ ಅಲ್ಲದೇ ಇಡೀ ದಕ್ಷಿಣ ಭಾರತದ ಚಿತ್ರರಂಗದವೂ ಪುನೀತ್ ರಾಜಕುಮಾರ್ ಗೆ ಕಂಬನಿ ಮಿಡಿದಿದೆ. ತಮಿಳು, ತೆಲುಗು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ಪುನೀತ್​ ರಾಜ್​ಕುಮಾರ್​ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಕಾಲಿವುಡ್​ ನಟ ಸೂರ್ಯ ಅವರು ಇಂದು (ನ.5) ಬೆಂಗಳೂರಿಗೆ ಆಗಮಿಸಿದ್ದಾರೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ ನಮಿಸಿ ಕಂಬನಿ ಮಿಡಿದಿದ್ದಾರೆ.

ಪುನೀತ್​ ರಾಜ್​ಕುಮಾರ್​ ಮತ್ತು ಸೂರ್ಯ ನಡುವೆ ಉತ್ತಮ ಬಾಂಧವ್ಯವಿತ್ತು. ಅಗಲಿದ ಗೆಳೆಯನನ್ನು ನೆನೆದು ಅವರು ಭಾವುಕರಾದರು. ‘ಪುನೀತ್​ ನಿಧನ ನ್ಯಾಯವಲ್ಲ. ಅವರಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳು ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯಲ್ಲಿ ಎಲ್ಲರಿಗೂ ಈ ಸುದ್ದಿ ನೋವು ನೀಡಿದೆ. ಅಣ್ಣಾವ್ರ ಕುಟುಂಬದ ಜೊತೆ ನಮ್ಮ ಕುಟುಂಬಕ್ಕೆ ಆತ್ಮೀಯತೆ ಇದೆ. ಪುನೀತ್​ ನನಗಿಂತ 3 ತಿಂಗಳು ದೊಡ್ಡವರು. ಪುನೀತ್​ ಸದಾ ಹಸನ್ಮುಖಿ ಆಗಿದ್ದರು. ಅವರ ಎಲ್ಲ ನೆನಪುಗಳನ್ನು ನಗುವಿನೊಂದಿಗೆ ಇಟ್ಟುಕೊಳ್ಳೋಣ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ’ ಎಂದು ಸೂರ್ಯ ಹೇಳಿದ್ದಾರೆ.

‘ಪುನೀತ್​ ಅವರನ್ನು ನಾವು ತುಂಬ ಮಿಸ್​ ಮಾಡಿಕೊಳ್ಳುತ್ತೇವೆ. ಅವರ ಕುಟುಂಬಕ್ಕೆ ನಾನು ಸಾಂತ್ವನ ಹೇಳುತ್ತೇನೆ’ ಎಂದು ಸೂರ್ಯ ಕಣ್ಣೀರು ಹಾಕಿದ್ದಾರೆ. ಈ ವೇಳೆ ಶಿವಣ್ಣ ​ ಕೂಡ ಜೊತೆಗಿದ್ದರು.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles