ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಇಂದು ಅಣ್ಣಾವ್ರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಬೆಳಗ್ಗೆ ದೊಡ್ಮನೆಗೆ ಭೇಟಿ ನೀಡಿದ ವೇಳೆ ರಾಘಣ್ಣ ಮತ್ತು ಶಿವಣ್ಣ ಅವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ರವಿ ಹೆಗ್ಡೆ ಕೂಡಸಚಿವರ ಜೊತೆಯಲಿದ್ದರು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪುನೀತ್ ಸಾವಿಗೆ ಕಂಬನಿ ಮಿಡಿದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು.
ಪುನೀತ್ ರಾಜಕುಮಾರ್ ಅವರ ಸಾವಿಗೆ ಕಂಬನಿ ಮಿಡಿಯದವರಿಲ್ಲ, ಅವರು ವಿಕ್ರಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಸುದ್ದಿ ತಿಳಿಯುತ್ತಿದಂತೆ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಸರ್ಕಾರದ ಸಚಿವರು ಪುನೀತ್ ಅವರ ಅಂತಿಮ ವಿಧಿ ವಿಧಾನ ಗಳೆಲ್ಲವೂ ಪೂರ್ಣಗೊಳ್ಳುವವರೆಗೂ ಸರ್ಕಾರಿ ಸಕಲ ಗೌರವಗಳನ್ನು ನೀಡುವ ಮೂಲಕ ಪುನೀತ್ ಅವರ ವ್ಯಕ್ತಿತ್ವಕ್ಕೆ ಸೂಕ್ತ ಗೌರವಗಳನ್ನು ನೀಡಿ ಅಂತ್ಯ ಸಂಸ್ಕಾರ ನಡೆಸಿಕೊಟ್ಟಿತ್ತು.