ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ವಿಚಾರ ತಿಳಿದ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಆತ್ಮಹತ್ಯೆಗೆ ಶರಣಾಗದಂತೆ ಮನವಿ ಮಾಡಿಕೊಂಡಿದ್ದಾರೆ.
ಪುನೀತ್ ಜೀವನ ಹಾಗೂ ಆರೋಗ್ಯವನ್ನು ಬಹಳ ಪ್ರೀತಿಸುತ್ತಿದ್ದರು. ಈ ರೀತಿಯ ನಿರ್ಧಾರಗಳನ್ನು ನೀವು ತೆಗೆದುಕೊಂಡರೆ, ನಿಮ್ಮ ಪ್ರೀತಿ ಪಾತ್ರರಿಗೆ ಯಾವ ರೀತಿಯ ಸಂದೇಶಗಳನ್ನು ಕೊಡುತ್ತೀರಿ? ನಿಮ್ಮನ್ನೇ ನಂಬಿಕೊಂಡಿರುವ ಪೋಷಕರು, ಮಕ್ಕಳಿರುತ್ತಾರೆ. ಅವರಿಗೆ ನೀವೇನು ಸಂದೇಶವನ್ನು ರವಾನಿಸುತ್ತೀರಿ? ನಿಮ್ಮ ಈ ನಿರ್ಧಾರಗಳು ನಿಮ್ಮ ನೆಚ್ಚಿನ ನಟನಿಗೆ ನೀವು ನೀಡುವ ಅಗೌರವವಾಗುತ್ತದೆ. ಅವರ ಬದುಕಿದಂತೆ ನಾವೂ ಬದುಕಬೇಕು. ಅವರಿಗೆ ಗೌರವ ನೀಡಬೇಕು ಎಂದು ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.
ಇದಷ್ಟೇ ಅಲ್ಲದೆ, ಮಾಧ್ಯಮಗಳೂ ಕೂಡ ಪುನೀತ್ ಅವರ ಅಂತಿಮ ಸಂಸ್ಕಾರದ ವಿಡಿಯೋಗಳನ್ನು ಪ್ರಸಾರ ಮಾಡದಂತೆ ಹಾಗೂ ಅಭಿಮಾನಿಗಳು ಪುನೀತ್ ಆಸ್ಪತ್ರೆಯಲ್ಲಿದ್ದ ಕೊನೆಯ ಕ್ಷಣದ ಫೋಟೋಗಳನ್ನೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.
****