ಅಯ್ಯೋ ಏನಪ್ಪಾ ಇದು ಪ್ರಕಾಶ್ ರಾಜ್ ಮತ್ತೆ ಏನ್ ಎಡವಟ್ಟು ಮಾಡ್ಕೋಂಡ್ ಬಿಟ್ರು ಅಂತ ಯೋಚಿಸ್ತಿದ್ದೀರಾ. ಹೌದು ನಟ ಪ್ರಕಾಶ್ ರಾಜ್ ಸದಾ ಒಂದಿಲ್ಲೊಂದು ಕಾಂಟ್ರವರ್ಸಿ ಮಾಡ್ಕೋತಾನೆ ಇರ್ತಾರೆ. ಆದ್ರೆ ಈಗ ಆಗಿರುವ ಕಾಂಟ್ರವರ್ಸಿ ಸಿನಿಮಾದ ಒಂದು ದೃಶ್ಯಕ್ಕೆ ಸಂಬಂಧಿಸಿದ್ದು.
ಯೆಸ್ ನವೆಂಬರ್ 2 ರಂದು ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿ ಸಕತ್ ಸೌಂಡ್ ಮಾಡ್ತಿರುವ ತಮಿಳಿನ ಸೂರ್ಯ ಅಭಿನಯದ ‘ಜೈ ಭೀಮ್’ ಸಿನಿಮಾದ ದೃಶ್ಯದ ಬಗ್ಗೆ ಈ ದೃಶ್ಯದಲ್ಲಿ ಪ್ರಕಾಶ್ ರಾಜ್ ಬಳಿ ಬರುವ ಅಟೆಂಡರ್ ಓರ್ವ ಹಿಂದಿಯಲ್ಲಿ ಮಾತನಾಡುತ್ತಾನೆ. ಈ ವೇಳೆ ಪ್ರಕಾಶ್ ರೈ ಅವರು ಆತನ ಕೆನ್ನೆಗೆ ಬಾರಿಸಿ ತಮಿಳಿನಲ್ಲಿ ಮಾತನಾಡುವಂತೆ ಸೂಚಿಸುತ್ತಾರೆ. ಇದೇ ದೃಶ್ಯವನ್ನು ಇಟ್ಟುಕೊಂಡು ಕೆಲವರು ಕೊಂಕು ತೆಗೆದಿದ್ದಾರೆ.

ದಕ್ಷಿಣ ಭಾರತದವರ ಮೇಲೆ ಹಿಂದಿ ಹೇರಿಕೆ ನಡೆಯುತ್ತಿದೆ ಎನ್ನುವ ಕೂಗು ಈ ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಅನೇಕರು ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ. ಆ ದೃಷ್ಟಿಯಲ್ಲೇ ನಿರ್ದೇಶಕರು ಈ ದೃಶ್ಯ ಹೆಣೆದಿದ್ದಾರೆ. ಪ್ರಕಾಶ್ ರಾಜ್ ನಟ. ನಿರ್ದೇಶಕರು ಹೇಳಿದಂತೆ ಅವರು ನಟಿಸಿದ್ದಾರೆ. ಇದಕ್ಕೆ ಅವರ ವಿರುದ್ಧ ಆರೋಪ ಹೊರಿಸುವುದು ಎಷ್ಟು ಸರಿ ಎಂದು ಎಲ್ಲರೂ ಕೇಳುತ್ತಿದ್ದಾರೆ. ಅಲ್ಲದೆ, ನಟನ ಬೆಂಬಲಕ್ಕೆ ನಿಂತಿದ್ದಾರೆ.

****