23.8 C
Bengaluru
Thursday, December 8, 2022
spot_img

ಪುನೀತ್ ಇಲ್ಲ ಎಂಬುದುನ್ನು ನಂಬಲಾಗುತ್ತಿಲ್ಲಾ: ನಾಗಾರ್ಜುನ

ತೆಲುಗು ನಟ ಅಕ್ಕಿನೇನಿ ನಾಗಾರ್ಜುನ್ ಮಂಗಳವಾರ (ನ 2) ನಟ ಶಿವಣ್ಣನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗಾರ್ಜುನ್ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಹಾಗೂ ಪುನೀತ್​ ರಾಜ್​ಕುಮಾರ್​ ಪೈಕಿ ಕಿರಿಯವರು ಪುನೀತ್​. ಅವರಿಗೆ 46 ವರ್ಷ ವಯಸ್ಸಾಗಿತ್ತು. ಆದರೆ, ದೇವರು ಮೊದಲು ಕರೆದುಕೊಂಡಿದ್ದು ಪುನೀತ್​ ಅವರನ್ನು. ಮನೆಯ ಕಿರಿಯ ಮಗ ಮೊದಲು ಹೋದನಲ್ಲ ಎನ್ನುವ ಕೊರಗು ಹಾಗೂ ದುಃಖ ರಾಜ್​ಕುಮಾರ್​ ಕುಟುಂಬವನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಇನ್ನೂ ಸಾಧನೆ ಮಾಡುತ್ತಿರುವ ವಯಸ್ಸಿನಲ್ಲೇ ಅವರು ನಿಧನ ಹೊಂದಿದ್ದು ನಿಜಕ್ಕೂ ಬೇಸರದ ಸಂಗತಿ. ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರು ಮಂಗಳವಾರ (ನವೆಂಬರ್​ 2) ಬೆಂಗಳೂರಿಗೆ ಆಗಮಿಸಿ, ಶಿವರಾಜ್​ಕುಮಾರ್​ಗೆ ಸಾಂತ್ವನ ಹೇಳಿದ್ದಾರೆ.

‘ಪುನೀತ್​​ ನಿಧನ ನಮಗೆ ಶಾಕಿಂಗ್ ಆಗಿತ್ತು. ಪುನೀತ್ ನಿಧನರಾಗಿದ್ದಾರೆ ಎಂದು ನಂಬಲಾಗುತ್ತಿಲ್ಲ. ಪುನೀತ್​ ಬಗ್ಗೆ ಏನು ಮಾತಾಡಬೇಕೆಂದು ಗೊತ್ತಾಗುತ್ತಿಲ್ಲ. ಸೆಟ್​ನಲ್ಲಿ ಪುನೀತ್ ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಅವರು ಯಾವಾಗ ಸಿಕ್ಕರೂ ಒಳ್ಳೆಯ ಮಾತನ್ನಷ್ಟೇ ಆಡುತ್ತಿದ್ದರು. ನಾಲ್ಕು ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದರು, ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು’ ಎಂದಿದ್ದಾರೆ ಅಕ್ಕಿನೇನಿ ನಾಗಾರ್ಜುನ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles