ಪುನೀತ್ ರಾಜ್ಕುಮಾರ್ ನಿಧನದಿಂದಾಗಿ ಈ ದೇಶವು ಮಹಾನ್ ನಟನನ್ನು ಕಳೆದುಕೊಂಡಿದೆ. ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ ಅಪ್ಪು ಜನಸೇವೆ ಮಾಡಿದರು. ಕಳಸಾ ಬಂಡೂರಿ ಹೋರಾಟಕ್ಕೂ ನೈತಿಕ ಬೆಂಬಲ ನೀಡಿದ್ದರು. ಉತ್ತರ ಕರ್ನಾಟಕದಲ್ಲಿ ಅಪ್ಪು ಹೆಸರಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಬೇಕು. IAS ಕೋಚಿಂಗ್ ಸೆಂಟರ್ ಸಹ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಪುನೀತ್ ರಾಜ್ಕುಮಾರ್ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಹಾಗೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು ಬೆಂಗಳೂರಿನಲ್ಲಿ ಬಸವ ಜಯಮೃತ್ಯುಂಜಯಶ್ರೀ ಒತ್ತಾಯ ಮಾಡಿದರು.
ನಮ್ಮ ನಾಡು ಮತ್ತು ದೇಶವು ಅಪ್ರತಿಮ ನಟನನ್ನು ಕಳೆದುಕೊಂಡು ಬಡವಾಗಿದೆ. ಭಗವಂತನ ಅನುಗ್ರಹ ಪಡೆದಿದ್ದ ಪುನೀತ್ ರಾಜ್ ಕುಮಾರ್ ಕುಟುಂಬದವರಿಗೆ ಧೈರ್ಯ ತುಂಬಲೆಂದು ನಾನು ಬಂದಿದ್ದೇನೆ. ಕರ್ನಾಟಕದಲ್ಲಿ ಅಪ್ಪು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸುತ್ತೇನೆ ಎಂದರು.
****