31.5 C
Bengaluru
Tuesday, March 28, 2023
spot_img

ಪುನೀತ್ ಸಮಾಧಿ ದರ್ಶನಕ್ಕೆ ಇನ್ನೆರಡು ದಿನ ಕಾಯಿರಿ ಅಭಿಮಾನಿಗಳಿಗೆ ಶಿವಣ್ಣ ಮನವಿ

ಹೃದಯಾಘಾತದಿಂದ ಶುಕ್ರವಾರ (ಅ.29) ನಿಧನರಾದ ಪುನೀತ್​ ರಾಜ್​ಕುಮಾರ್​ ಅವರ ಸಮಾಧಿಗೆ ಕುಟುಂಬದವರು ಇಂದು (ನ.2) ಹಾಲು-ತುಪ್ಪ ಅರ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಈ ಕಾರ್ಯ ನಡೆಯಲಿದೆ. ಆದರೆ ಅಪ್ಪು ಸಮಾಧಿ ದರ್ಶನ ಮಾಡಲು ಅಭಿಮಾನಿಗಳಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ದೂರದೂರದ ಊರುಗಳಿಂದ ಅಪಾರ ಸಂಖ್ಯೆಯ ಜನರು ಬಂದು ಸಮಾಧಿ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ‘ಇನ್ನು ಎರಡು ದಿನ ಕಾಯಿರಿ’ ಎಂದು ಅಭಿಮಾನಿಗಳಿಗೆ ಶಿವರಾಜ್​ಕುಮಾರ್​ ಮನವಿ ಮಾಡಿಕೊಂಡಿದ್ದಾರೆ.

‘ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಲೇ ಇದ್ದಾರೆ. ಆದರೆ ಸಮಾಧಿ ನೋಡಲು ಯಾರಿಗೂ ಈಗ ಅವಕಾಶ ಇಲ್ಲ. ಶೀಘ್ರವೇ ಅವಕಾಶ ಮಾಡಿಕೊಡುತ್ತೇವೆ. ಮಕ್ಕಳು ಮತ್ತು ಮನೆಯವರಿಂದ ಮಂಗಳವಾರ ಹಾಲು-ತುಪ್ಪ ಕಾರ್ಯ ಮಾಡಿಸಬೇಕು. ಅದೊಂದು ಕಾರ್ಯ ಮುಗಿಸಿದ ಬಳಿಕವೇ ಬೇರೆಯವರಿಗೆ ಅನುಮತಿ ನೀಡೋಣ ಅಂತ ತೀರ್ಮಾನಿಸಿದ್ದೇವೆ’ ಎಂದು ರಾಘಣ್ಣ ಹೇಳಿದ್ದರು.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles