22.9 C
Bengaluru
Friday, March 24, 2023
spot_img

ಪುನೀತ್ ಮನೆಯಿಂದ ಆಸ್ಪತ್ರೆಗೆ ಹೋಗುವಾಗ ಸಿಸಿಟಿವಿ ಯಲ್ಲಿ ಸೆರೆಯಾದ ದೃಶ್ಯ!

ಪುನೀತ್​ ರಾಜ್​ಕುಮಾರ್ ಮೃತಪಟ್ಟು ಐದು ದಿನಗಳು ಕಳೆದಿವೆ. ಇಂದು (ನವೆಂಬರ್​ 2) ಅವರ ಸಮಾಧಿಗೆ ಹಾಲುತುಪ್ಪ ಬಿಡುವ ಕಾರ್ಯ ಕೂಡ ನಡೆದಿದೆ. ಅವರನ್ನು ಕಳೆದುಕೊಂಡು ಇಷ್ಟು ದಿನವಾದರೂ ಅಭಿಮಾನಿಗಳ ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಅವರು ಕಂಡಿದ್ದ ಕನಸು ಅವರ ಜತೆಗೆ ಮಣ್ಣಾಗಿದೆ. ಇದು ಸಾಕಷ್ಟು ನೋವು ತರಿಸಿದೆ. ಪುನೀತ್​ ಮೃತಪಡುವ ದಿನ ಬೆಳಗ್ಗೆ ಜಿಮ್​ ಮಾಡಿದ್ದರು ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಅವರು ಜಿಮ್​ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಈ ಗೊಂದಲಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಮಧ್ಯೆ ಅವರು ಆಸ್ಪತ್ರೆಗೆ ತೆರಳುವುದಕ್ಕೂ ಮೊದಲು ಮನೆಯಿಂದ ಕಾರು ಹತ್ತಿ ಹೊರಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಈಗ ಲಭ್ಯವಾಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪುನೀತ್​ ರಾಜ್​ಕುಮಾರ್ ಅವರು ಮೊದಲು ಮನೆಯಿಂದ ಹೊರ ಬಂದು ಕಾಯುತ್ತಿರುತ್ತಾರೆ. ಇದಾದ ಬೆನ್ನಲ್ಲೇ ಅವರ ಪತ್ನಿ ಮನೆಯಿಂದ ಹೊರ ಬರುತ್ತಾರೆ. ಇಬ್ಬರೂ ಕಾರು ಏರಿ ಮನೆಯಿಂದ ಹೊರಡುತ್ತಾರೆ. ಕಾರು ಹೊರಡುತ್ತಿದ್ದಂತೆ ಸೆಕ್ಯುರಿಟಿ ಸಿಬ್ಬಂದಿ ಮನೆಯ ಗೇಟ್​ ತೆರೆಯುತ್ತಾರೆ. ಇದಿಷ್ಟು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ. ಈ ದೃಶ್ಯಗಳಲ್ಲಿ ಎಲ್ಲರೂ ಆತಂಕ ಗೊಂಡಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles