ನಾವು ದೇವರನ್ನು ಕಳೆದುಕೊಂಡಿದ್ದೇವೆ. ಸದ್ಯ ಜೇಮ್ಸ್ ಚಿತ್ರದ ಬಗ್ಗೆ ಮಾತನಾಡುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.ಅಪ್ಪು ಸರ್ ಹೋಗುವಾಗಲೂ ಯಾರಿಗೂ ತೊಂದರೆ ಮಾಡದೆ ಸಿನಿಮಾದ ಎಲ್ಲ ಜವಾಬ್ದಾರಿಯನ್ನು ಮುಗಿಸಿ ಕೊಟ್ಟಿದ್ದಾರೆ. ಅವರು ಇರುವಾಗಲೂ ಹೋದಾಗಲೂ ಒಬ್ಬರಿಗೂ ತೊಂದರೆ ಮಾಡಲಿಲ್ಲ. ನಿರ್ಮಾಪಕರಿಗೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್‍ಕುಮಾರ್ ತಿಳಿದ್ದಾರೆ.

ಚಿತ್ರದ ಡಬ್ಬಿಂಗ್ ಮಾತ್ರ ಬಾಕಿ ಇದೆ. ಇದಕ್ಕೆ ಯಾರ ಬಳಿ ಡಬ್ಬಿಂಗ್ ಮಾಡಿಸಬೇಕೆಂದು ಇನ್ನು ತೀರ್ಮಾನಿಸಿಲ್ಲ. ಶೂಟಿಂಗ್ ಸಮಯದ ವಾಯ್ಸ್ ಅನ್ನು ರೀ ಸಿಂಕ್ರೊನೈಸ್ ಮಾಡಲು ಸಾಧ್ಯವಾಗುತ್ತದೆಯೇ ಎಂಬುದನ್ನು ನೋಡಬೇಕು. ಇಲ್ಲವಾದಲ್ಲಿ ಶಿವಣ್ಣ ಅವರ ಬಳಿ ಮಾಡಿಸಲು ಯೋಚಿಸುತ್ತೇವೆ. ಇದರ ಬಗ್ಗೆ ಇನ್ನೂ ಚಿಂತಿಸಿಲ್ಲ ಎಂದರು.
ಅವರ ಕುಟುಂಬ ಈಗ ತುಂಬಾ ನೋವಿನಲ್ಲಿದೆ. ಹಾಗೆಯೇ ಜೇಮ್ಸ್ ತಂಡ ಕೂಡ ದೇವರನ್ನು ಕಳೆದುಕೊಂಡು ಶೋಕದಲ್ಲಿ ಮುಳುಗಿದೆ. ಅಪ್ಪು ಅವರ ಕಾರ್ಯಗಳೆಲ್ಲ ಮುಗಿದ ಮೇಲೆ, ಚಿತ್ರದ ಬಗ್ಗೆ ಎಲ್ಲರೂ ಕೂತು ಮಾತನಾಡುತ್ತೇವೆ. ಅಲ್ಲಿಯವರೆಗೂ ಏನು ಹೇಳಲು ಆಗದು.
ಒಂದಂತೂ ನಿಜ, ಅಪ್ಪು ದೇವರಂತೆ ಕಾಣುವ ಪೂಜಿಸುವ ಅಭಿಮಾನಿಗಳಿಗೆ ಜೇಮ್ಸ್ ಚಿತ್ರ ನಿರಾಸೆ ಮೂಡಿಸುವುದಿಲ್ಲ. ಅವರು ಅಂದುಕೊಂಡ ಹಾಗೆ ಚಿತ್ರ ಮೂಡಿಬಂದಿದೆ. ಚಿತ್ರಮಂದಿರಕ್ಕೆ ಬಂದು ನೋಡಿದಾಗ ಅದು ಗೊತ್ತಾಗಲಿದೆ ಎಂದು ಚೇತನ್ ತುಂಬಾ ನೋವಿನಿಂದ ನುಡಿದರು.
****