ದೊಡ್ಮನೆ ಕುಟುಂಬದಿಂದ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಹಾಲು- ತುಪ್ಪ ಬಿಡುವ ಕಾರ್ಯ ಇಂದು ನಡೆಯುತ್ತಿದೆ. ಡಾ.ರಾಜ್ ಕುಟುಂಬಸ್ಥರು ಹಾಗೂ ಆಪ್ತವರ್ಗವಷ್ಟೇ ಇದರಲ್ಲಿ ಭಾಗಿಯಾಗಿದೆ. ಅಪ್ಪುವಿಗೆ ಇಷ್ಟವಾದ ಊಟ, ತಿಂಡಿ, ತಿನಿಸುಗಳನ್ನು ಸಂಬಂಧಿಕರು ಎಡೆ ಇಡುತ್ತಿದ್ದಾರೆ. ಕಬಾಬು , ಬಿರಿಯಾನಿ , ಇಡ್ಲಿ , ಕಾಳು, ಗೊಜ್ಜು , ಮೊಟ್ಟೆ ಬಿರಿಯಾನಿ , ಬಜ್ಜಿ , ಐದಾರು ವೈರಟಿ ಸಿಹಿ ತಿನಿಸು, ಅಪ್ಪುವಿಗೆ ಪ್ರಿಯವಾದ ಮುದ್ದೆ ಹಾಗೂ ನಾಟಿ ಕೋಳಿ ಸಾಂಬಾರ್, ಸುಮಾರು 50 ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಎಡೆ ಇಡಲಾಗಿದೆ. ಸಮಾಧಿಯ ಮುಂದಿನ ನಂದಾದೀಪ ಐದು ದಿನಗಳಿಂದ ಆರದಂತೆ ನೋಡಿಕೊಂಡು ಉರಿಸಲಾಗುತ್ತಿದೆ. ಸಮಾಧಿಯ ಮೇಲೆ ಹಣತೆಯಲ್ಲಿ ದೀಪ ಹಚ್ಚಿ ಬಳಿಕ ಬಾಳೆ ಎಲೆಯಲ್ಲಿ ಕುಟುಂಬಸ್ಥರು ಎಡೆ ಇಡುತ್ತಿದ್ದಾರೆ.
ಕಾರ್ಯದಲ್ಲಿ ಸಚಿವ ಗೋಪಾಲಯ್ಯ, ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಚಿನ್ನೆಗೌಡ, ವಿಜಯ ರಾಘವೇಂದ್ರ ಮತ್ತು ಕುಟುಂಬಸ್ಥರು, ಶಾಸಕ ರಾಜುಗೌಡ, ಗಾಜನೂರಿನಿಂದಲೂ ಆಗಮಿಸಿರುವ ದೊಡ್ಮನೆ ಕುಟುಂಬಸ್ಥರು, ಲಕ್ಷ್ಮೀ , ಪೂರ್ಣಿಮಾ, ಧನ್ಯ , ಧೀರನ್, ಶ್ರೀಮುರುಳಿ, ಸಾರಾ ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
****