31.5 C
Bengaluru
Tuesday, March 28, 2023
spot_img

ಅಪ್ಪು ಕನಸಿನ ಬಗ್ಗೆ ನೆನೆದು ರಾಘಣ್ಣನ ಭಾವುಕ ಪೋಸ್ಟ್

ಡಾ. ರಾಜ್​ಕುಮಾರ್​ ಟ್ರಸ್ಟ್​ನಿಂದ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಪುನೀತ್​ ಆಸೆಪಟ್ಟಿದ್ದರು. ಆ ಕನಸನ್ನು ಸಹೋದರ ರಾಘವೇಂದ್ರ ರಾಜ್​ಕುಮಾರ್​ ಜೊತೆ ಹೇಳಿಕೊಂಡಿದ್ದರು. ಅದು ನನಸಾಗುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿರುವುದು ದುಃಖದ ಸಂಗತಿ. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ರಾಘಣ್ಣ ಪೋಸ್ಟ್​ ಮಾಡಿದ್ದಾರೆ.

‘ಇತ್ತೀಚೆಗೆ ನನಗೆ ದಾದಾಸಾಹೇಬ್​ ಫಾಲ್ಕೆ ಎಮ್​ಎಸ್​ಕೆ ಟ್ರಸ್ಟ್​ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅಪ್ಪುಗೆ ಎಲ್ಲಿಲ್ಲದ ಸಂತೋಷ. ನನ್ನನ್ನು ತಕ್ಷಣ ಭೇಟಿ ಮಾಡಿ, ಈ ಸೆಲ್ಫಿ ತೆಗೆದು, ರಾಘಣ್ಣ.. ನಾವೂ ಸಹ ಈ ಮೂರ್ತಿಯ ರೂಪದ ಹಾಗೆ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾ. ರಾಜ್​ಕುಮಾರ್​ ಟ್ರಸ್ಟ್​ನಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಮಾಡೋಣ ಅಂತ ಹೇಳಿದ್ದನು. ಅಪ್ಪು ನಿನ್ನ ಆಲೋಚನೆಗೆ ನನ್ನದೊಂದು ನಮನ. ಲವ್​ ಯೂ ಮಗನೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಬರೆದುಕೊಂಡಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles