ಕರುನಾಡ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಣ್ಣಾಗಿ ಹೋಗಿದ್ದಾರೆ. ಅವರ ನೆನಪುಗಳು ಮಾತ್ರ ಎಂದೆಂದಿಗೂ ಎಲ್ಲರ ಮನಸ್ಸಲ್ಲಿ ಹಚ್ಚಹಸಿರು. ಹಲವರು ಅಪ್ಪು ಮತ್ತೇ ಹುಟ್ಟಿ ಬನ್ನಿ. ಈ ಸಾವಿನ ಸುದ್ದಿ ಸುಳ್ಳಾಗಿ ಹೋಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇವೆಲ್ಲದರ ಜೊತೆಗೆ ಭಾರತ ಚಿತ್ರರಂಗ ಅಪ್ಪು ಅವರ ಸಾವಿಗೆ ಕಂಬನಿ ಮಿಡಿದಿದೆ. ತಮಿಳು ನಟ ಶಿವ ಕಾರ್ತಿಕೇಯನ್ ಇಂದು ಪುನೀತ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಮತ್ತೆ ಪುನೀತ್ ಸಮಾಧಿಗೆ ಬೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವ ಕಾರ್ತಿಕೇಯನ್, “ಇಂದು ನಮಗೆ ಪುನೀತ್ ಇಲ್ಲ ಅನ್ನೋದನ್ನ ಅಂದುಕೊಳ್ಳೋದಕ್ಕೆ ಸಾಧ್ಯವಾಗುತ್ತಿಲ್ಲ ಪುನೀತ್ ಒಬ್ಬ ಅದ್ಭುತ ನಟರಾಗಿದ್ದರು ಇಂದಿಗೂ ನಾವು ಶಾಕ್ ನಲ್ಲಿಯೇ ಇದ್ದೇವೆ ಅದರಿಂದ ಹೊರಗೆ ಬರೋಕೆ ಆಗ್ತಾ ಇಲ್ಲ” ಒಂದು ತಿಂಗಳ ಹಿಂದೆಯಷ್ಟೆ ನಾನು ಪುನೀತ್ ಜೊತೆ ಮಾತನಾಡಿದ್ದೆ ಇಡೀ ಸಿನಿಮಾ ಇಂಡಸ್ಟ್ರಿ ಗೆ ಇದೊಂದು ದೊಡ್ಡ ಲಾಸ್ ತುಂಬಾ ಒಳ್ಳೆಯ ಮನಸ್ಸು, ಎಲ್ಲರನ್ನ ಪ್ರೀತಿಯಿಂದ ಮಾತನಾಡಿಸೋವ್ರು ಪುನೀತ್, ಪುನೀತ್ ಅದ್ಬುತ ನಟ ಅವರ ನಿಧನ ನೊವು ತಂದಿದೆ ನನ್ನ ‘ಡಾಕ್ಟರ್’ ಸಿನಿಮಾ ನೋಡಿ ವಿಶ್ ಮಾಡಿದ್ದರು. ಆಗ ನಂಗೆ ಮಾತನಾಡೋಕೆ ಸಾಧ್ಯವಾಗಿರ್ಲಿಲ್ಲ, ಆ ಬಗ್ಗೆ ಬೇಸರವಿದೆ ನಾನು ಅವರನ್ನು ಎರಡು ವರ್ಷಗಳಿಂದ ಅವಾರ್ಡ್ ಫಂಕ್ಷನ್ ನಲ್ಲಿ ಮೊದಲು ಭೇಟಿಯಾಗಿದ್ದೆ ಅದೊಂದು ಫ್ಯಾನ್ ಬಾಯ್ ಮೂಮೆಂಟ್ ನನಗೆ,
ಅವರಣ್ಣ ಶಿವಣ್ಣ ಕೂಡ ನನಗೆ ಆಪ್ತರು ಸಿನೆಮಾ ಬಗ್ಗೆ ಬಹಳ ಮಾತನಾಡುತ್ತಿದ್ವಿ ಅಪ್ಪು ಸಿನೆಮಾಗಳನ್ನು ನೋಡಿದ್ದೇನೆ, ಅವರ ಎನರ್ಜಿ ನೋಡಿ ಶಾಕ್ ಆಗಿದ್ದೆ ಅವರಂಥಾ ಓರ್ವ ಲೆಜೆಂಡ್ ನಮ್ಮಂಥವರ ತಮಿಳು ಸಿನೆಮಾ ನೋಡಿ ಕಾಲ್ ಮಾಡ್ತಾರೆ ಅಂದ್ರೆ ಅದು ಅವರ ವ್ಯಕ್ತತ್ವಕ್ಕೆ ಹಿಡಿದಿರುವ ಕೈಗನ್ನಡಿ ಅವರ ಅಗಲಿಕೆ ಎಲ್ಲರಂತೆ ನನ್ನಲ್ಲೂ ಬೇಸರ ತರಿಸಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ
ಮನೆಗೆ ಬಂದು ಭೇಟಿಯಾಗುವಂತೆ ಆಹ್ವಾನಿಸಿದ್ರು ಬೆಂಗಳೂರಿಗೆ ಬನ್ನಿ ಭೇಟಿಯಾಗಿ ಅಂದ್ರು ಆದ್ರೆ ಅವರನ್ನು ಭೇಟಿ ಮಾಡಲು ಸಾಧ್ಯವೇ ಆಗಲಿಲ್ಲ ಇಂದು ನಾನು ಭೇಟಿಯಾಗಲು ಬಂದೆ ಅವರೇ ಇಲ್ಲ ಯಾವತ್ತೂ ಅವರು ಮನದಲ್ಲಿ ಇರ್ತಾರೆ ನನಗೇ ಇನ್ನು ನಂಬಲು ಸಾಧ್ಯವಾಗುತ್ತಿಲ್ಲ ಅಂಥದರಲ್ಲಿ ಅಭಿಮಾನಿಗಳು ಕುಟುಂಬದವರು ಹೇಗೆ ನಂಬುತ್ತಾರೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು
****