23.8 C
Bengaluru
Thursday, December 8, 2022
spot_img

36 ವರ್ಷವಾದ್ರೂ, ಇಷ್ಟು ಪ್ರೀತಿ ಸಿಗ್ತಿರೋದು ಪುಣ್ಯ..! Shivraj kumar

ಭಜರಂಗಿ 2 ಸಿನಿಮಾ ರಿಲೀಸ್ ಆದ ಹಿನ್ನಲೆಯಲ್ಲಿ ಥಿಯೇಟರ್ ಗೆ ರೌಂಡಪ್ ಹಾಕಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾವುಕರಾಗಿದ್ದಾರೆ. ಥಿಯೇಟರ್ ಮುಂದೆ ಅಭಿಮಾನಿಗಳು ಸಿನಿಮಾವನ್ನು ಸ್ವಾಗತಿಸಿದ ಪರಿ ನೋಡಿ ಭಾವುಕನಾಗಿದ್ದೇನೆ ಈ ರೀತಿ ಎಲ್ಲಾ ಆಗೋದು ಯಾವುದೋ ಜನ್ಮದ ಪುಣ್ಯ ಎಂದು ಶಿವರಾಜ್ ಕುಮಾರ್ ಮಾಧ‍್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.



36 ವರ್ಷವಾದ್ರೂ ಇನ್ನೂ ಅದೇ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದರೆ ಇದನ್ನೆಲ್ಲಾ ನೋಡುವಾಗ ಹೃದಯ ತುಂಬಿ ಬರುತ್ತದೆ. ಭಾವುಕನಾಗಿದ್ದೇನೆ, ಈ ಪ್ರೀತಿಗೆ ಏನು ಹೇಳಲು ಸಾಧ‍್ಯ ಎಂದು ಶಿವಣ್ಣ ಹೇಳಿದ್ದಾರೆ. ಇನ್ನು, ಬೆಳಗ್ಗಿನಿಂದಲೇ ಭಜರಂಗಿ 2 ಸಿನಿಮಾ ನೋಡಲು ಜನ ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತಿದ್ದರು. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿರುವುದು ಸಹಜವಾಗಿಯೇ ಶಿವಣ್ಣನ ಮುಖದಲ್ಲಿ ನಗು ಮೂಡಿಸಿದೆ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles