ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಭಜರಂಗಿ 2 ಕೂಡ ಒಂದು. ಭಜರಂಗಿ ನಾನಾ ಕಾರಣಕ್ಕೆ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾ. ಭಜರಂಗಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ರಾತ್ರಿ ಇಡೀ ಕಾದು ಈಗ ಬೆಳ್ಳಂ ಬೆಳಗ್ಗೆ ಫ್ಯಾನ್ಸ್ ಶೋ ವೀಕ್ಷಿಸಲು ಅಭಿಮಾಗಳ ದೊಡ್ಡ ದಂಡು ಬೀಡುಬಿಟ್ಟಿದೆ. ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸ್ಯಾಂಡಲ್ ವುಡ್ ಚಿಟ್ಟೆ ವಸಿಷ್ಠ ಸಿಂಹ ಶೋ ನೋಡಲು ಬಂದಿರುವುದು ಶಿವಣ್ಣ ಅಭಿಮಾನಿಗಳ ಸಂಭ್ರಮಕ್ಕೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಹೌದು ಭಜರಂಗಿ 2 ಚಿತ್ರದ ಫ್ಯಾನ್ಸ್ ಶೋ ನೋಡಲು ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಕೂಡ ಚಿತ್ರಮಂದಿರಕ್ಕೆ ಆಗಮಿಸಿದ್ರು ತಮ್ಮ ನೆಚ್ಚಿನ ನಟ ಶಿವಣ್ಣನ ಭಜರಂಗಿ 2 ಚಿತ್ರದ ಬಗ್ಗೆ ಬಾರಿ ನಿರೀಕ್ಷೆ ಇದ್ದು ಸಿನಿಮಾ ನೋಡಲು ನಾನು ಉತ್ಸುಕನಾದ್ದೀನಿ ಎಂದುರು, ಹಿಂದೆ ಟಗರು ಚಿತ್ರವನ್ನು ಹೀಗೆ ಥಿಯೇಟರ್ನಲ್ಲಿ ಫ್ಯಾನ್ಸ್ ಶೋ ನೋಡಿದ್ದು ಅದರ ನಂತ್ರ ಮತ್ತೆ ಶಿವಣ್ಣ ನ ಚಿತ್ರವನ್ನ ನೋಡೋಕೆ ಖುಷಿ ಆಗ್ತಿದೆ ಅಂತೇಳಿದ್ರು. ನಾನು ಊರಲ್ಲಿ ಇಲ್ಲದ ಕಾರಣ ಸಲಗ ಮತ್ತು ಕೋಟಿಗೊಬ್ಬ ಸಿನಿಮಾವನ್ನ ನೋಡಲು ಸಾಧ್ಯವಾಗಿಲ್ಲಾ, ಎರಡು ಚಿತ್ರಗಳು ಬಿಗ್ ಹಿಟ್ ಆಗಿವೆ, ಒಂದುವರೆ ವರ್ಷದ ಬಳಿಕ ಕನ್ನಡ ಚಿತ್ರರಂಗ ಚೇತರಿಕೆ ಹಾದಿಯನ್ನು ಕಾಣುತ್ತಿರುವುದು ಸಂತಸ ತಂದಿದೆ ಎಂದರು.
****