ಅನಾರೋಗ್ಯ ಕಾರಣದಿಂದ ಇಂದು (ಅಕ್ಟೋಬರ್ 29) ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್ಕುಮಾರ್ ಅಲ್ಲಿಯೆ ಮೃತಪಟ್ಟಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಈ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಏಕಾಏಕಿ ಪುನೀತ್ ರಾಜ್ಕುಮಾರ್ ಅವರು ಮೃತಪಟ್ಟಿರುವುದು ಸ್ಯಾಂಡಲ್ವುಡ್ ಪಾಲಿಗೆ ನಿಜಕ್ಕೂ ಶಾಕ್ ಆಗಿದೆ.
ಶುಕ್ರವಾರ ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಆಸ್ಪತ್ರೆಯಿಂದ ಹೊರಬರಲೆ ಇಲ್ಲ.
ಸ್ಯಾಂಡಲ್ ವುಡ್ ಗೆ ಶುಕ್ರವಾರ ಶುಭ ಅಂತ ಹೇಳ್ತಾರೆ ಆದ್ರೆ ಇವತ್ತು ಇಡೀ ಸ್ಯಾಂಡಲ್ ವುಡ್ ಗೆ ಕರಾಳ ಶುಕ್ರವಾರ, ಬೆಳಗ್ಗೆ ಇನ್ನು ಅಣ್ಣ ಶಿವರಾಜ್ ಕುಮಾರ್ ಅವರ ಭಜರಂಗಿ 2 ಚಿತ್ರ ಬಿಡುಗಡೆಯಾಗಿ ಇಡೀ ಚಿತ್ರೋದ್ಯಮ ಸಂತಸದಲ್ಲಿರುವಾಗಲೇ ವಿಧಿ ಇಂತಹದೊಂದು ಆಟ ಆಡಿರುವುದು ದುರಂತವೇ ಸರಿ.
****