ಕೋವಿಡ್ ನಂತರ ಸ್ಯಾಂಡಲ್ ವುಡ್ ನಲ್ಲಿ ಚೇತರಿಕೆಯ ಹಾದಿ ಆಶಾದಾಯಕವಾಗಿದೆ. ನಿರ್ಮಾಪರು ಇದನ್ನೆ ನಿರೀಕ್ಷಿಸಿದ್ದರೂ ಕೂಡ ಸದ್ಯ ಈಗಾಗಲೇ ತೆರೆ ಕಂಡಿರುವ ಚಿತ್ರಗಳು ನಿರ್ಮಾಪರನ್ನು ಸೇಫ್ ಮಾಡಿವೆ. ತಮ್ಮ ನೆಚ್ಚನ ಹೀರೊ ನಟನೆಯನ್ನು ಕಣ್ತುಂಬಿಕೊಳ್ಳಲ್ಲು ಅಭಿಮಾನಿಗಳು ಥಿಯೇಟರ್ ಕಡೆ ಓಡೋಡಿ ಬರುತ್ತಿದ್ದಾರೆ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಕಟೌಟ್ ಗಳಿಗೆ ಹಾಲಿನಿಂದ ಅಭಿಷೇಕ ಮಾಡುತ್ತಿದ್ದಾರೆ, ಚಿತ್ರಮಂದಿರಗಳ ಹೊರಗೆ ಮತ್ತು ಒಳಗೆ ಮತ್ತೆ ಹಳೆಯ ವೈಭವ ಮರುಕಳಿಸುತ್ತಿದೆ.
ಭಜರಂಗಿ 2 ಚಿತ್ರದ ಮೇಲಿನ ಅಭಿಮಾನಿಗಳ ಕ್ರೇಜ್ ಇಂದಿನಿಂದಲೇ ಶುರುವಾಗಿಬಿಟ್ಟಿದೆ.ಭಜರಂಗಿ 2 ಶಿವಣ್ಣ ಅಭಿನಯದ 123ನೇ ಚಿತ್ರ ಇದರ ಹಿನ್ನಲೆಯಲ್ಲಿ ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಬರೋಬ್ಬರಿ 122 ನಕ್ಷತ್ರಗಳನ್ನು ಹಾಕುವುದರ ಮೂಲಕ ಹೊಸ ದಾಖಲೆಯನ್ನು ಬರೆಯೋದಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ. ಇಲ್ಲಿಯ ತನಕ ಕನ್ನಡದ ಯಾವ ಚಿತ್ರಕ್ಕೂ 122 ನಕ್ಷತ್ರಗಳನ್ನು ಹಾಕಿರಲಿಲ್ಲ. ಇದೇ ಮೊದಲ ಬಾರಿಗೆ ಭಜರಂಗಿಗೆ ಇಷ್ಟೊಂದು ನಕ್ಷತ್ರಗಳನ್ನು ಅರ್ಪಿಸುವುದರ ಮೂಲಕ ಅಭಿಮಾನಿಗಳು ಹೊಸ ದಾಖಲೆ ನಿರ್ಮಿಸಿದ್ದಾರೆ. ಭಜರಂಗಿ ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೆ ತೆರೆಗೆ ಬರ್ತಾ ಇದೆ. ದೇಶಾದ್ಯಂತ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭಜರಂಗಿ ರಿಲೀಸ್ ಆಗುತ್ತಿದೆ.
ಭಜರಂಗಿಯ ಕಟೌಟ್‌ನಿಂದ ಅಲಂಕಾರಗೊಂಡು ಚಿತ್ರಮಂದಿರಗಳು ಕಂಗೊಳಿಸುತ್ತಿವೆ. ಬೆಂಗಳೂರು ಸೇರಿದಂತೆ ದೇಶದ ನಾನಾ ಚಿತ್ರಮಂದಿರಗಳು ಭಜರಂಗಿಯ ಕಟೌಟ್ ತೊಟ್ಟು ಮಿಂಚುತ್ತಿವೆ. ಅಭಿಮಾನಿಗಳು ಕೂಡ ವಿಶೇಷವಾಗಿ ಸಂಭ್ರಮಿಸಲು ಸಿದ್ಧವಾಗಿದ್ದಾರೆ. ಕೊರೊನಾದಿಂದಾಗಿ ಸಿನಿಮಾ ರಿಲೀಸ್ ಸಂಭ್ರಮವನ್ನು ಮಿಸ್ ಮಾಡಿಕೊಳ್ಳುತ್ತಾ ಇದ್ದವರು ಇದೀಗ ಮತ್ತೆ ಸಂಭ್ರಮಿಸಲು ಶುರು ಮಾಡಿದ್ದಾರೆ. ಅದರಲ್ಲು ಲಾಕ್‌ಡೌನ್ ಬಳಿಕ ತೆರೆಗೆ ಬರುತ್ತಿರುವ ಶಿವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಇದು. ಹಾಗಾಗಿ ಅವರ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಒಟ್ಟಾರೆ ಅಭಿಮಾನಿಗಳಿಗೆ ಭಜರಂಗಿ ಭರ್ಜರಿ ಮನೋರಂಜನೆಯ ರಸದೌತಣ ಉಣಬಡಿಸುಲು ರೆಡಿಯಾಗಿದೆ. ಕೊರೊನಾ ಕಾರಣಕ್ಕೆ ಕೆಲ ಕಾಲ ಬಿಗ್ ಸ್ಕ್ರೀನ್ ಮೇಲೆ ಸಿನಿಮಾ ನೋಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದವರು, ಈಗ ಯಾವುದೇ ಭಜರಂಗಿಗೆ ಹಾಜರಾಗಲು ಸಿದ್ಧವಾಗಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ನಟಿ ಭಾವನಾ ಮೆನನ್, ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶಿವರಾಜ್ ಕುಮಾರ್ ಮತ್ತು ಎ.ಹರ್ಷ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಮೂರನೇ ಚಿತ್ರ.
****