23.8 C
Bengaluru
Thursday, December 8, 2022
spot_img

ಸುದೀಪ್-ದರ್ಶನ್ ಸ್ನೇಹಕ್ಕೆ ಮತ್ತೆ ಜೀವ ತುಂಬಿದ ‘ಸುದೀಪ್ ಮಾತು’

ಸುದೀಪ್ ಹಾಗೂ ದರ್ಶನ್ ಬಹಳ ಆತ್ಮೀಯ ಗೆಳೆಯರಾಗಿದ್ದರು ಆದರೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಇಬ್ಬರೂ ದೂರಾಗಿದ್ದರು. ಆ ನಂತರ ಇಬ್ಬರ ಅಭಿಮಾನಿಗಳು ಸ್ಟಾರ್ ವಾರ್ ಹುಟ್ಟುಹಾಕಿ ಇಬ್ಬರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿದ್ದರು. ಆದರೆ ಈಗ ಸುದೀಪ್ ಆಡಿರುವ ಮಾತುಗಳು ಇಬ್ಬರ ಸ್ನೇಹದ ನಡುವೆ ಬಂದಿರುವ ಅಪಸ್ವರಕ್ಕೆ ಸ್ವರ ಮಾಧುರ್ಯ ಸೇರಿಸಿದಂದಾಗಿದೆ. ಹಾಗಿದ್ರೆ ಏನು ಹೇಳಿದ್ದಾರೆ ಸುದೀಪ್.

ಜೀ ಕನ್ನಡ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ದರ್ಶನ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ನಟ ಸುದೀಪ್. ”ದರ್ಶನ್ ಸದಾ ನನ್ನ ಗೆಳೆಯನೇ” ಎಂದಿರುವ ಸುದೀಪ್ ಆ ಮೂಲಕ ತಾವೊಬ್ಬ ವಿಶಾಲ ಹೃದಯಿ ವ್ಯಕ್ತಿ ಎಂಬುದನ್ನೂ ಸಾಬೀತು ಮಾಡಿದ್ದಾರೆ.

ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುದೀಪ್‌ಗೆ ನಿರೂಪಕರು ದರ್ಶನ್ ಹಾಗೂ ಸುದೀಪ್ ಒಟ್ಟಿಗಿರುವ ಚಿತ್ರವನ್ನು ತೋರಿಸಿ ಆ ಬಗ್ಗೆ ಮಾತನಾಡುವಂತೆ ಕೇಳಿದಾಗ ”ಅವನು ನನ್ನ ಗೆಳೆಯ, ಸದಾ ನನ್ನ ಗೆಳೆಯ, ಪರಸ್ಪರ ಮಾತನಾಡಿಲ್ಲ, ಒಟ್ಟಿಗೆ ಇಲ್ಲ ಎಂದ ಮಾತ್ರಕ್ಕೆ ಯಾವತ್ತೂ ನಾನು ಕೆಟ್ಟದು ಬಯಸಿಲ್ಲ. ಕೆಟ್ಟದ್ದು ಬಯಸೋದು ಇಲ್ಲ” ಎಂದಿದ್ದಾರೆ ಸುದೀಪ್. ಸುದೀಪ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ವೈರಲ್ ಆಗಿದೆ. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles