ಅಲ್ಲು ಅರ್ಜುನ್ ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈಗ ಪುಷ್ಪ ಟೀಂ ನಿಂದ ಮತ್ತೊಂದು ಸಾಮಿ.. ಸಾಮಿ ಸಾಂಗ್ ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಆಗಿದೆ. ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದಾರೆ ಸಾಂಗ್ ಕೂಡ ಮಸ್ತ್ ಎಂದಿದ್ದಾರೆ ಕೇಳುಗರು. ಹಾಡಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಚಿತ್ರ ಮತ್ತಷ್ಟು ಹೈಪ್ ಪಡೆದಿದೆ.
‘ಪುಷ್ಪ’ ಸಿನಿಮಾ ಇದೇ ಡಿಸೆಂಬರ್ 17ಕ್ಕೆ ರಿಲೀಸ್ ಆಗುತ್ತಿದೆ. ಪುಷ್ಪ ಸಿನಿಮಾ ಬಹು ಭಾಷೆಯಲ್ಲಿ ತೆರೆಗೆ ಬರುತ್ತ ಇದೆ. ಕರ್ನಾಟಕದಲ್ಲಿ ಬೇರೆ ಭಾಷೆಯ ಜೊತೆ ಕನ್ನಡದಲ್ಲಿ ಪುಷ್ಪ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಕೂಡ ಸಿನಿಮಾವನ್ನು ಏಕಕಾಲಕ್ಕೆ ರಿಲೀಸ್ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಅಲ್ಲು ಅರ್ಜುನ್ ಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಇಲ್ಲಿ ಕನ್ನಡ ಮತ್ತು ತೆಲುಗು ಎರಡು ವರ್ಷನ್‌ಗಳಲ್ಲೂ ಕೂಡ ಚಿತ್ರ ರಿಲೀಸ್ ಆಗಲಿದೆ. ‘ಪುಷ್ಪ’ ಚಿತ್ರ ವಿಶ್ವ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ರೆಡಿಯಾಗಿರುವ ಸಿನಿಮಾ. ಸಿನಿ ಪ್ರೇಕ್ಷಕರಲ್ಲಿ ಪುಷ್ಪ ಎಲ್ಲಿಲ್ಲದ ನಿರೀಕ್ಷೆ ಮೂಡಿಸಿದೆ.
ಸುಕುಮಾರ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದು. ಈಗಾಗಲೇ ರಿಲೀಸ್ ಆಗಿರುವ ಪುಷ್ಪ ಚಿತ್ರದ ಒಂದು ತುಣುಕುಗಳು ಸಿನಿಮಾ ಇತಿಹಾಸ ಬರೆಯುವುದು ಪಕ್ಕಾ ಎನ್ನುವ ಭರವಸೆ ಮೂಡಿಸಿದೆ. ಪುಷ್ಪ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದೆ.
****