16.9 C
Bengaluru
Tuesday, February 7, 2023
spot_img

ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿ ಗೆ ಹೊಸ ರೂಪ..! complete story

ಕನ್ನಡ ಚಿತ್ರೋದ್ಯಮಕ್ಕೆ ಬಹಳಷ್ಟು ಅನುಕೂಲಕಾರಿ ಆಗುವಂಥ ಹಾದಿಯತ್ತ ಬರ್ತಿದೆ ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿ. ಹೌದು ಈಗ ಹೊಸ ರೂಪದೊಂದಿಗೆ ಚೆನ್ನೈನ ಖ್ಯಾತ ನಿರ್ಮಾಪಕ, ನಟ ಹಾಗೂ ಉದ್ಯಮಿ ವೇಲ್ಸ್ ಗ್ರೂಪ್ ನ ಮುಖ್ಯಸ್ಥ ಡಾ.ಐಸಿರಿ ಕೆ.ಗಣೇಶ್, ಇನೋವೇಟಿವ್ ಫಿಲ್ಮ್ ಸಿಟಿಯನ್ನು ಖರೀದಿಸಿದ್ದಾರೆ‌.ಇನ್ನು ಮುಂದೆ ಇದು “ವೇಲ್ಸ್‌ ಇನ್ನೋವೇಟಿವ್ ಫಿಲಂ ಸಿಟಿ” ಎಂದು ಕರೆಯಲಾಗುವುದೆಂದು ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿಯ ಮ್ಯಾನೇಜರ್ ಬಶೀರ್ ಅಹ್ಮದ್ ತಿಳಿಸಿದ್ದಾರೆ‌.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಶೀರ್ ಅವರು, ಕರ್ನಾಟಕದ ಮೇಲೆ ಅಪಾರ ಪ್ರೀತಿ ಹೊಂದಿರುವ ಅವರು ಈ ಜಾಗವನ್ನು ಖರೀದಿಸಿದ್ದಾರೆ ಹಾಗೂ ಅನೇಕ ಗ್ಲೋಬಲ್ ಶಾಲೆಗಳನ್ನು ತೆಗೆದುಕೊಂಡು, ವೇಲ್ಸ್ ರವೀಂದ್ರ ಭಾರತಿ ಶಾಲೆ ಎಂದು ನಾಮಕರಣ ಮಾಡಿದ್ದಾರೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ ಎಂಬ ವಿಷಯವನ್ನು ತಿಳಿಸಿದ್ದಾರೆ.

ಮೈ ಮೂವೀ ಬಜಾರ್ ಹಾಗೂ ಶ್ರೇಯಸ್ಸ್ ಮೀಡಿಯಾ ಮುಖ್ಯಸ್ಥ ನವರಸನ್ ಮಾತನಾಡುತ್ತಾ ನಾನು ಚೆನ್ನೈ ಗೆ ಹೋದಾಗಲೆಲ್ಲಾ ಗಣೇಶ್ ಸರ್ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಅವರು ತಮಿಳಿನಲ್ಲಿ ಸುಮಾರು 20ಕ್ಕು ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈಗ ಇನ್ನೋವೇಟಿವ್ ಫಿಲಂ ಸಿಟಿಗೆ ನೂತನ ಕಾಯಕಲ್ಪ ನೀಡಲು ಸಜ್ಜಾಗಿದ್ದಾರೆ. ಸದ್ಯ ಇನ್ನೋವೇಟಿವ್ ಫಿಲಂ ಸಿಟಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.

ಫೆಬ್ರವರಿ ಅಂತ್ಯದ ವೇಳೆಗೆ ನೀವು ಈ ಫಿಲಂ ಸಿಟಿಯನ್ನು ಹೊಸರೂಪದಲ್ಲಿ ನೋಡಬಹುದು. ಸದ್ಯದಲ್ಲೇ ಇದರ ಕಾರ್ಯ ಆರಂಭವಾಗಲಿದೆ. ರೈಲ್ವೇ ನಿಲ್ದಾಣ ಸೇರಿದಂತೆ ಹಲವು ಬಗ್ಗೆಯ ಸೆಟ್ ಗಳನ್ನು ನಿರ್ನಿಸಲಾಗುತ್ತಿದೆ. ಇನ್ನು ಮುಂದೆ ಕನ್ನಡ ಸಿನಿಮಾ ಚಿತ್ರೀಕರಣಕ್ಕೆ ಬೇರೆ ಊರಿಗೆ ಹೋಗದೆ, ಅಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಈ ಫಿಲಂ ಸಿಟಿಯಲ್ಲಿ ನೀಡುವ ಉದ್ದೇಶವಿದೆ.

ಚಿತ್ರದ ಮುಹೂರ್ತ ಸಮಾರಂಭದ ದಿನ ನಿರ್ಮಾಪಕರಿಂದ ಯಾವುದೇ ಹಣ ಪಡೆಯದೆ ಉಚಿತವಾಗಿ ನೀಡಬೇಕೆಂದು ತೀರ್ಮಾನವಾಗಿದೆ. ನಮ್ಮ ಸಂಸ್ಥೆ ವೇಲ್ಸ್ ಫಿಲಂ ಸಿಟಿಯೊಂದಿಗೆ ವರ್ಕಿಂಗ್ ಪಾರ್ಟ್ನರ್ ಆಗಿ ಕಾರ್ಯ ನಿರ್ವಹಿಸಲಿದೆ. ಇನ್ನೂ ನಮ್ಮ ಮೈ ಮೂವೀ ಬಜಾರ್ ಆಪ್ ಸಿದ್ದವಾಗುತ್ತಿದ್ದು, ಇದು ಸಹ ಚಿತ್ರರಂಗದ ಎಲ್ಲಾ ನಿರ್ಮಾಪಕರಿಗೆ ಅನುಕೂಲವಾಗಿರಲಿದೆ. ಈ ಎಲ್ಲಾ ಕಾರ್ಯಗಳಿಗೂ ನಿಮ್ಮ ಬೆಂಬಲವಿರಲಿ ಎಂದರು.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles