ರಾಘವೇಂದ್ರ ರಾಜಕುಮಾರ್ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಿಭಿನ್ನ ಕಥಾಹಂದರದ “ಬೆಳಕು” ಚಿತ್ರ ನವೆಂಬರ್ 5 ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬಿ.ಎನ್ ಗಂಗಾಧರ್ ಅರ್ಪಿಸುವ ಈ ಚಿತ್ರವನ್ನು ಅಂಕಿತ ಫಿಲಂಸ್ ಲಾಂಛನದಲ್ಲಿ ಬಿ.ಜಿ.ಶ್ರೇಯಸ್ಸ್ ನಿರ್ಮಿಸಿದ್ದಾರೆ. ಬಿ.ಮಂಜುನಾಥ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪಳನಿ ಡಿ ಸೇನಾಪತಿ ಸಂಗೀತ ನಿರ್ದೇಶನ, ಪ್ರಸಾದ್ ಬಾಬು ಛಾಯಾಗ್ರಹಣ ಹಾಗೂ ಶಿವಪ್ರಸಾದ್ ಯಾದವ್ ಸಂಕಲನ “ಬೆಳಕು” ಚಿತ್ರಕ್ಕಿದೆ. ರಾಘವೇಂದ್ರ ರಾಜಕುಮಾರ್, ಸುಧಾರಾಣಿ, ನಿರಿಕ್ಷಾ ಶೆಟ್ಟಿ, ಸಚಿನ್, ಅಶ್ವಿನಿ, ಮಧುಸೂದನ್.
****