ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರದ (Girl’s breakup anthem) ಹಾಡು ನವೆಂಬರ್ 4, ಬೆಳಗ್ಗೆ 11 ಗಂಟೆಗೆ ದೀಪಾವಳಿ ಹಬ್ಬದ ದಿನ ಎ2 ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ನಿರ್ದೇಶಕ ಪ್ರೇಮ್ ಈ ಚಿತ್ರವನ್ನು 21 ಜನವರಿ 2022 ಕೆ ರಿಲೀಸ್ ಮಾಡುವ ಸಿದ್ದತೆ ಮಾಡಿಕೊಂಡಿದ್ದಾರೆ.
ಏಕ್ ಲವ್ ಯಾ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯೂಸಿ ಇದ್ದ ಕಾರಣಕ್ಕೆ ಕಳೆದ ವಾರ ನಿರ್ದೇಶಕ ಪ್ರೇಮ್ ತಮ್ಮ ಹುಟ್ಟಿದ ಹಬ್ಬವನ್ನು ಕೂಡ ಅದ್ಧೂರಿಯಾಗಿ ತಮ್ಮ ಫ್ಯಾನ್ಸ್ ನೊಂದಿಗೆ ಆಚರಣೆ ಮಾಡಿಕೊಳ್ಳಲು ಸಾದ್ಯವಾಗಿರಲಿಲ್ಲ. ಈಗ ಎಲ್ಲಾ ಕೆಲಸಗಳು ಕಂಪ್ಲೀಟ್ ಆಗಿದ್ದು ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಜನವರಿ 21 ಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ.

‘ಏಕ್ ಲವ್ ಯಾ’ ಚಿತ್ರದಲ್ಲಿ ಪ್ರೇಮ್ ಅವರ ಬಾಮೈದ ರಾಣಾ ಹೀರೋ ಆಗಿ ನಟಿಸುತ್ತಿದ್ದು, ರೀಷ್ಮಾ ನಾಣಯ್ಯ ನಾಯಕಿಯಾಗಿ ಪರಿಚಿತರಾಗುತ್ತಿದ್ದಾರೆ. ಮಿಕ್ಕಂತೆ ರಚಿತಾ ರಾಮ್, ‘ಶಿಷ್ಯ’ ದೀಪಕ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತವಿದೆ. ಈ ಚಿತ್ರವನ್ನು ಪ್ರೇಮ್ ಅವರ ಪತ್ನಿ ರಕ್ಷಿತಾ ಪ್ರೇಮ್ ಅವರು ರಕ್ಷಿತಾ ಫಿಲಂ ಫ್ಯಾಕ್ಟರಿ ಮೂಲಕ ನಿರ್ಮಾಣ ಮಾಡಿದ್ದಾರೆ.
****